Wednesday, January 22, 2025
ಸುದ್ದಿ

Breaking News : ದ.ಕ. ಜಿಲ್ಲೆಯಲ್ಲಿ ರವಿವಾರ ಸಂಪೂರ್ಣ ಕೊರೊನಾ ನೆಗೆಟಿವ್ – ಕಹಳೆ ನ್ಯೂಸ್

ಮಂಗಳೂರು, ಮಾ 29 : ದ.ಕ. ಜಿಲ್ಲೆಯಲ್ಲಿ ಈಗಾಗಲೇ 7 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಪ್ರತೀ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಜನತೆಯ ಆತಂಕ ಹೆಚ್ಚಾಗುತ್ತಿತ್ತು. ಕೆಲವು ದಿನಗಳು ಪಾಸಿಟಿವ್ ಆಗಿದ್ರೆ, ಬಹುತೇಕ ದಿನಗಳಲ್ಲಿ ನೆಗೆಟಿವ್ ಪ್ರಕರಣಗಳೇ ಹೆಚ್ಚಾಗಿ ವರದಿಯಾಗುತ್ತಿದ್ದವು. ಪರೀಕ್ಷೆಗೆ ಕಳುಹಿಸಿರುವುದರಲ್ಲಿ ಇಲ್ಲಿಯ ತನಕ ಶೇ. 80ರಷ್ಟು ನೆಗೆಟಿವ್ ವರದಿಗಳೇ ಬಂದಿರುವುದು ಖುಷಿಯ ವಿಚಾರವಾಗಿದೆ.

ದ.ಕ ಜಿಲ್ಲೆಯಲ್ಲಿ ಇಲ್ಲಿಯ ತನಕ ಪರೀಕ್ಷೆಗೆ ರವಾನಿಸಿ ಲಭಿಸಿರುವ ವರದಿಗಳಲ್ಲಿ ಕೇವಲ ಏಳು ಪ್ರಕರಣಗಳಷ್ಟೇ ಪಾಸಿಟಿವ್ ಆಗಿದೆ. ಉಳಿದಂತೆ ಎಲ್ಲಾ ಪ್ರಕರಣಗಳು ನೆಗೆಟಿ ಆಗಿದೆ. ಇದು ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಆತಂಕದಲ್ಲಿದ್ದ ಜನತೆಗೆ ಇಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ನೆಗೆಟಿವ್ ಪ್ರಕರಣಗಳ ವರದಿ ಖುಷಿಯನ್ನುಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುತೇಕ ನೆಗೆಟಿವ್ ಪ್ರಕರಣಗಳು ದಾಖಲಾಗಿರುವುದರಿಂದ ಜನತೆ ಖುಷಿಪಟ್ಟು ತಮ್ಮ ಜವಾಬ್ದಾರಿಯನ್ನು ಮರೆಯದಿರಿ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದು ಸಿಹಿಸುದ್ದಿ. ಆದರೆ, ನಿಯಂತ್ರಣದಲ್ಲಿದೇ ಎಂದ ಮಾತ್ರಕ್ಕೆ ನಾವು ನಮ್ಮ ಜವಾಬ್ದಾರಿ ಮರೆಯುವಂತಿಲ್ಲ. ಸಂಪೂರ್ಣ ನಿಯಂತ್ರಣಕ್ಕೆ ಬರಬೇಕಾದಲ್ಲಿ ನಾವು ಇಂದಿನ ಪರಿಸ್ಥಿತಿಯನ್ನೇ ಮುಂದುವರೆಸಬೇಕಿದೆ. ಮನೆಯಲ್ಲೇ ಇದ್ದುಕೊಂಡು ಆಡಳಿತ ವರ್ಗದೊಂದಿಗೆ ಸಹಕಾರ ನೀಡಬೇಕಾದ ಅಗತ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಗೆ ಸಿಹಿ ನೀಡಿದ ವರದಿ:

182  – ಇದುವರೆಗೆ ಪರೀಕ್ಷೆಗೆ ಕಳುಹಿಸಿದ ಸ್ಯಾಂಪಲ್ ಗಳು
161  – ಇಲ್ಲಿಯ ತನಕ ದೊರೆತಿರುವ ನೆಗೆಟಿವ್ ಪ್ರಕರಣಗಳು
07    – ಜಿಲ್ಲೆಯಲ್ಲಿ ದೃಢಪಟ್ಟಿರುವ ಪಾಸಿಟಿವ್ ಪ್ರಕರಣಗಳು
14    – ಇನ್ನಷ್ಟೇ ವರದಿ ಬರಲು ಬಾಕಿ ಇರುವ ಪ್ರಕರಣಗಳು
161  – ನೆಗೆಟಿವ್ ಬಂದ ಕಾರಣ ಆತಂಕ ಇಲ್ಲ