Thursday, January 23, 2025
ಸುದ್ದಿ

Corona Health Bulletin : ರಾಜ್ಯದಲ್ಲಿಂದು 7 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 83ಕ್ಕೇರಿಕೆ – ಕಹಳೆ ನ್ಯೂಸ್

ಬೆಂಗಳೂರು(ಮಾ.29): ರಾಜ್ಯದಲ್ಲಿ ಕೊರೋನಾ ವೈರಸ್​ ಹಾವಳಿ ಮುಂದುವರೆದಿದೆ. ಇಂದು ಹೊಸದಾಗಿ 7 ಕೋವಿಡ್​​-19 ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಉಡುಪಿಯ ಇಬ್ಬರು ಮತ್ತು ನಂಜನಗೂಡಿನ 5 ಜನರಲ್ಲಿ ಕೊರೋನಾ ಪತ್ತೆಯಾದ ಕಾರಣ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

ಇದುವರೆಗೂ ರಾಜ್ಯದಲ್ಲಿ 83 ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ 41 ಕೊರೋನಾ ಪಾಸಿಟಿವ್ ಕೇಸ್​ಗಳಿವೆ. ನಂತರದ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಮತ್ತು ಮೈಸೂರು ಇವೆ. ಇಲ್ಲಿ ತಲಾ ಎಂಟು ಪ್ರಕರಣಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು


ರಾಜ್ಯದಲ್ಲಿ ಬೆಳಕಿಗೆ ಬಂದಿರುವ 53 ಪಾಸಿಟಿವ್ ಪ್ರಕರಣಗಳ ಪೈಕಿ ಐವರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಕೊರೋನಾ ಪಾಸಿಟಿವ್ ಪ್ರಕರಣಗಳ ಜಿಲ್ಲಾವಾರು ಪಟ್ಟಿ ಈ ಕೆಳಕಂಡಂತಿದೆ:

ಬೆಂಗಳೂರು – 41 ಪ್ರಕರಣ
ಚಿಕ್ಕಬಳ್ಳಾಪುರ – 8 ಪ್ರಕರಣ
ಮೈಸೂರು – 8 ಪ್ರಕರಣದಕ್ಷಿಣ ಕನ್ನಡ – 7 ಪ್ರಕರಣ
ಉತ್ತರ ಕನ್ನಡ – 7 ಪ್ರಕರಣ
ಕಲಬುರಗಿ – 3 ಪ್ರಕರಣ
ದಾವಣಗೆರೆ – 3 ಪ್ರಕರಣ
ಉಡುಪಿ – 3 ಪ್ರಕರಣ
ಕೊಡಗು – 1 ಪ್ರಕರಣ
ಧಾರವಾಡ – 1 ಪ್ರಕರಣ
ತುಮಕೂರು – 1 ಪ್ರಕರಣ

ಇಂದು ಪತ್ತೆಯಾದ 7 ಕೇಸುಗಳ ವಿವರ ಹೀಗಿದೆ..

P1
– 39 ವರ್ಷದ ಪುರುಷ, ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿ
– ‎ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ
– ‎ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

P2
– 38 ವರ್ಷದ ಪುರುಷ, ಮೈಸೂರು ಜಿಲ್ಲೆಯ ನಿವಾಸಿ
– ‎P52ರ ಸಂಪರ್ಕ ಹೊಂದಿದ್ದ ವ್ಯಕ್ತಿ
– ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

P3
– 21 ವರ್ಷದ ಪುರುಷ, ನಂಜನಗೂಡು ನಿವಾಸಿ
– ‎ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ
– ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

P4
– 31 ವರ್ಷದ ಪುರುಷರೊಬ್ಬರು, ನಂಜನಗೂಡು ನಿವಾಸಿ
– ‎ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ
– ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

P5
– 42 ವರ್ಷದ ಪುರುಷ ನಂಜನಗೂಡು ನಿವಾಸಿ
– ‎ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ
– ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

P6
– 35 ವರ್ಷದ ಪುರುಷ ಉಡುಪಿ ಜಿಲ್ಲೆಯ ನಿವಾಸಿ
– ಮಾರ್ಚ್ 17‌ರಂದು ದುಬೈನಿಂದ ಮಂಗಳೂರಿಗೆ ಬಂದಿದ್ರು
– ಉಡುಪಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

P7
– 29 ವರ್ಷದ ಪುರುಷ, ಉಡುಪಿ ಜಿಲ್ಲೆಯ ನಿವಾಸಿ
– ‎ಕೇರಳ ಜಿಲ್ಲೆಯ ತ್ರಿವೇಣ್ಡ್ರಂ ಗೆ ಪ್ರಯಾಣ ಮಾಡಿ ಬಂದಿದ್ದಾರೆ
– ‎ಉಡುಪಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ ಸಾವಿರ ದಾಟಿದೆ. ನಿನ್ನೆ ಗುಜರಾತ್ ಒಂದರಲ್ಲೇ 4 ಮಂದಿ ಕೊರೋನಾಗೆ ಬಲಿಯಾಗಿದ್ದರು. ಈ ಪೈಕಿ ಅಹಮದಾಬಾದ್​​​-2, ಭಾವನಗರ್ ಮತ್ತು ಸೂರತ್​​ನಲ್ಲಿ ಒಂದೊಂದು ಸಾವು ಆಗಿತ್ತು. ಈ ಮೂಲಕ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿತ್ತು.