Thursday, January 23, 2025
ಸುದ್ದಿ

ಏರ್‌ ಇಂಡಿಯಾ ಅಂಗಸಂಸ್ಥೆಯ ಉದ್ಯೋಗಿಗೆ ಕೊರೊನಾ ಪತ್ತೆ – ಕಹಳೆ ನ್ಯೂಸ್

ನವದೆಹಲಿ, ಮಾ.30 : ಕೊರೊನಾ ಸೋಂಕು ಏರ್‌ ಇಂಡಿಯಾದ ಅಂಗಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರಲ್ಲಿ ಭಾನುವಾರ ಪತ್ತೆಯಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಸೋಂಕು ಪತ್ತೆಯಾಗಿರುವ ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್ ಸರ್ವೀಸಸ್‌ ಲಿಮಿಟೆಡ್‌ನ ಮಹಿಳಾ ಉದ್ಯೋಗಿಯನ್ನು ಜೋಗೀಶ್ವರಿಯ ಬಿಎಂಸಿ ಆಸ್ಪತ್ರೆಗ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಐಎಟಿಎಸ್‌ಎಲ್‌ ಸಂಸ್ಥೆಯು ಏರ್‌ ಇಂಡಿಯಾದ ಭೂ-ಚಟುವಟಕೆಗಳನ್ನು ನಿರ್ವಹಿಸುವ ಅಂಗಸಂಸ್ಥೆಯಾಗಿದೆ.

ಸರ್ಕಾರವು ಕಳೆದ ಬುಧವಾರ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮುನ್ನ ಏರ್‌ ಇಂಡಿಯಾ ವಿಮಾನದಲ್ಲಿ ಈ ಮಹಿಳಾ ಉದ್ಯೋಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.