Friday, January 24, 2025
ಸುದ್ದಿ

Breaking News : ಉಪ್ಪಿನಂಗಡಿ : ಕ್ವಾರೆಂಟೈನ್‌ ಉಲ್ಲಂಘನೆ – ಕರಾಯದ ಸೋಂಕಿತ ಯುವಕನ ಮೇಲೆ ಪ್ರಕರಣ ದಾಖಲು – ಕಹಳೆ ನ್ಯೂಸ್

ಉಪ್ಪಿನಂಗಡಿ, ಮಾ.30  : ಕ್ವಾರಂಟೈನ್ ಉಲ್ಲಂಘಿಸಿದ ಕಾರಣದಿಂದಾಗಿ ಕೊರೊನಾ ಸೋಂಕು ದೃಢಪಟ್ಟ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ನಿವಾಸಿ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ವಿರುದ್ಧವಾಗಿ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ದುಬೈನಿಂದ ಬೆಂಗಳೂರು ಮೂಲಕ ಮಾರ್ಚ್ 21 ರಂದು ಊರಿಗೆ ಆಗಮಿಸಿದ್ದು ಆ ಬಳಿಕ 14 ದಿನಗಳು ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿತ್ತು. ಆದರೂ ಆತ ಅದನ್ನು ಉಲ್ಲಂಘನೆ ಮಾಡಿದ್ದಾನೆ. ಆ ಬಳಿಕ ಆತನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ಕ್ವಾರೆಂಟೈನ್‌ ಉಲ್ಲಂಘನೆ ಮಾಡಿದ ಆತನ ಮೇಲೆ ಹಾಗೆಯೇ ಆತನ ಮನೆಯವರ ಮೇಲೆಯೂ ಪುತ್ತೂರು ಸಹಾಯಕ ಆಯುಕ್ತರು ಉಪ್ಪಿನಂಗಡಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ.