Friday, January 24, 2025
ಸುದ್ದಿ

ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆಯ ಪತಿ ಕುಮಾರಧಾರ ನದಿಯಲ್ಲಿ ಶವವಾಗಿ ಪತ್ತೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ, ಮಾ.30  : ಕುಮಾರಧಾರ ನದಿಯಲ್ಲಿ ಗ್ರಾ.ಪಂ. ಸದಸ್ಯೆಯ ಪತಿ ಶವವಾಗಿ ಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರನ್ನು ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆಯ ಪತಿ ಬಾಬು ಕುಲ್ಕುಂದ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಬ್ರಹ್ಮಣ್ಯ ಕುಮಾರಧಾರ ನದಿಯಲ್ಲಿ ಶವವೊಂದು ಇಂದು ತೇಲುತ್ತಿರುವುದು ಕಂಡುಬಂದಿದ್ದು ಈ ಕುರಿತಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳ್ಕಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಶವವನ್ನು ಮೇಲಕ್ಕೆ ಎತ್ತಿದ್ದು ಮೃತರು ಗ್ರಾ.ಪಂ. ಸದಸ್ಯೆಯ ಪತಿ ಬಾಬು ಕುಲ್ಕುಂದ ಎಂದು ತಿಳಿದು ಬಂದಿದೆ.

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಎರಡು ದಿನಗಳ ಹಿಂದೆಯೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಜಾರಿ ನದಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.