Friday, January 24, 2025
ಸುದ್ದಿ

ಸುಳ್ಳು ಸುದ್ದಿ ವಾಟ್ಸಾಪ್ ಮಾಡಿದ್ರೂ ಕ್ರಿಮಿನಲ್ ಪ್ರಕರಣ- ಪೊಲೀಸ್ ಆಯುಕ್ತರಿಂದ ಖಡಕ್ ಸೂಚನೆ – ಕಹಳೆ ನ್ಯೂಸ್

ಮಂಗಳೂರು,ಮಾ 30 : ಜಿಲ್ಲಾಧಿಕಾರಿ ,ಪೊಲೀಸ್ ಆಯುಕ್ತರು, ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ನಡವಳಿ, ನೋಟಿಸ್, ಸುಳ್ಳು ಸುದ್ದಿಗಳು, ವದಂತಿಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಸಾಕಷ್ಟು ಕ್ರಿಯೆಟ್ ಮಾಡಿ ಫಾರ್ವರ್ಡ್ ಮಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಇಂತವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ.ಹರ್ಷ ಎಚ್ಚರಿಕೆ ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಪ್ರಕರಣವೊಂದಕ್ಕೆ ಸಂಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಜಿಲ್ಲೆಯ ಜನರು ಅಧಿಕೃತವಾಗಿ ಅಧಿಕಾರಿಗಳಿಂದ ನೀಡಲಾದ ಸುದ್ದಿಗಳನ್ನಷ್ಟೇ ಜನರು ನಂಬಬೇಕು. ಅಧಿಕೃತರಿಂದ ಸಹಿ ಮಾಡಲಾದ ಪತ್ರಿಕಾ ಪ್ರಕಟನೆ ಅಥವಾ ಸಂಬಂಧಪಟ್ಟ ಇಲಾಖೆಯ ಟ್ವಿಟರ್ ಮೂಲಕ ನೀಡಲಾದ ಹೇಳಿಕೆಗಳನ್ನು ಮಾತ್ರವೇ ಜನರು ಪರಿಗಣಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು