Sunday, January 19, 2025
ಸುದ್ದಿ

ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನ ದತ್ತು ಪಡೆದ ಅಮಿತ್ ಶಾ

ಕಲಬುರಗಿ: ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿರನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದತ್ತು ಪಡೆದಿದ್ದಾರೆ. ಇಬ್ಬರು ಮಕ್ಕಳ ಪೂರ್ಣ ಪ್ರಮಾಣದ ಶಿಕ್ಷಣದ ವೆಚ್ಚವನ್ನ ಬಿಜೆಪಿಯೇ ನೋಡಿಕೊಳ್ಳಲ್ಲಿದೆ ಅಂತಾ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರದಂದು ಸೇಡಂ ರಸ್ತೆಯ ಇಎಸ್‍ಐ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದಿದ್ದ ಬಿಜೆಪಿ ವಿಭಾಗೀಯ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಬಂಡೆ ಮಕ್ಕಳ ಪರಿಸ್ಥಿತಿಯ ಬಗ್ಗೆ ಹಾಗೂ ಸರ್ಕಾರ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಹಣ ಮಾತ್ರ ನೀಡುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಅಂತಾ ಶಾ ಗಮನಕ್ಕೆ ತಂದಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾ, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಪಕ್ಷವೇ ಭರಿಸುವುದರ ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಘೋಷಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ 2014ರ ಜನವರಿ 8ರಂದು ಶಾರ್ಪ್ ಶೂಟರ್ ಮುನ್ನಾ ಜೊತೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಎದೆಗೆ ಗುಂಡೇಟು ಬಿದ್ದು ಸುಮಾರು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮರಾಗಿದ್ದರು. ನಂತರ ಮಕ್ಕಳ ಜವಬ್ದಾರಿ ಪತ್ನಿ ಮಲ್ಲಮ್ಮ ಬಂಡೆ ಹೆಗಲಿಗೆ ಬಿದ್ದಿತ್ತು. ಆದರೆ ಮಲ್ಲಮ್ಮ ಬಂಡೆ ಕೂಡ ಬ್ರೇನ್ ಟ್ಯೂಮರ್‍ನಿಂದ ಬಳಲುತ್ತ ಚಿಕಿತ್ಸೆ ಪಡೆಯುತ್ತಿದ್ದರು. 2016 ಜುಲೈ 9ರಂದು ಮಲ್ಲಮ್ಮ ಕೂಡ ವಿಧಿವಶರಾಗಿದ್ದರು.

ಹೀಗಾಗಿ ಅಮಿತ್ ಶಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕ ಬಂಡೆಯವರ ಇಬ್ಬರು ಮಕ್ಕಳನ್ನ ದತ್ತು ಪಡೆದಿದೆ.

ವರದಿ : ಕಹಳೆ ನ್ಯೂಸ್