ಕೊರೋನಾ ಲಾಕ್‌ಡೌನ್-ಪುತ್ತೂರು ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ-ನಿರ್ಗತಿಕರಿಗೆ,ಬಿಕ್ಷುಕರಿಗೆ ಅಹಾರ, ಆಶ್ರಯದ ವ್ಯವಸ್ಥೆ-ಕಹಳೆ ನ್ಯೂಸ್
ಜಗತ್ತಿನಾದ್ಯಂತ ಕೊರೋನ ವೈರಸ್ ಸಾವಿರಗಟ್ಟಲೆ ಜೀವಗಳನ್ನು ಬಲಿ ಪಡೆದುಕೊಳ್ಳುವ ಮೂಲಕ ಹಾಹಾಕಾರ ಎಬ್ಬಿಸಿದೆ.
ಭಾರತದಲ್ಲೂ ತನ್ನ ಕಬಂಧಬಾಹುಗಳನ್ನು ಚಾಚಲು ಅಣಿಯಾಗಿರುವ ಕೊರೋನ ವೈರಸ್ ನ್ನು ತಡೆಯಲು ಕೇಂದ್ರ ಸರಕಾರ ಈಗಾಗಲೇ 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಈಗಾಗಲೇ ಕೆಲವು ದಿನಗಳು ಸಂದು ಹೋಗಿದೆ.
ಧರ್ಮೋ ರಕ್ಷತಿ ರಕ್ಷತಃ, ಸೇವಾ ಸುರಕ್ಷಾ ಸಂಸ್ಕಾರ ಎಂಬ ಧ್ಯೇಯದೊಂದಿಗೆ ವಿಶ್ವದಾದ್ಯಂತ ಧರ್ಮದ ಕೆಲಸ ಮಾಡುತ್ತಿರುವ ವಿಶ್ವ ಹಿಂದೂ ಪರಿಷದ್ ಬಜರಂಗದಳ ಲಾಕ್ ಡೌನ್ ಸಂದರ್ಭ ಜನಸಾಮಾನ್ಯರಿಗೆ ಮೂಲ ಸೌಕರ್ಯಗಳ ಕೊರತೆಯಾಗಬಾರದೆಂದು, ದೇಶದಾದ್ಯಂತ ಕೆಲಸ ಮಾಡುತ್ತಿದ್ದಾರೆ.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ, ಪ್ರಖಂಡ ಹಾಗು ನಗರ ಘಟಕದ ಕಾರ್ಯಕರ್ತರು ತುರ್ತು ಸಹಾಯವಾಣಿ ಮೂಲಕ ಕಳೆದ 6 ದಿನಗಳಿಂದ ನಿರ್ಗತಿಕರಿಗೆ,ಬಿಕ್ಷುಕರಿಗೆ ದಿನದ 2 ಹೊತ್ತು ಊಟದ ವ್ಯವಸ್ಥೆ ಹಾಗು ಕೆಲ ನಿರ್ಗತಿಕರಿಗೆ ಆಶ್ರಯದ ವ್ಯವಸ್ಥೆ,50 ಕ್ಕಿಂತ ಹೆಚ್ಚು ಅಶಕ್ತ ಕುಟುಂಬಗಳಿಗೆ ದಿನಸಿ ಹಾಗು ದಿನಬಳಕೆ ವಸ್ತುಗಳನ್ನು ನೀಡುವಿಕೆ, ವೈದ್ಯಕೀಯ ನೆರವಿನ ಅವಶ್ಯಕತೆ ಇರುವವರಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವುದು, ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವುದು, ದೂರದೂರಿನಿಂದ ಕೆಲಸಕ್ಕಾಗಿ ಪುತ್ತೂರಿಗೆ ಬಂದು ಮರಳಿ ತನ್ನೂರಿಗೆ ತೆರಳಲಾಗದ ಸಂತ್ರಸ್ತರಿಗೆ ಕಾನೂನು ಕ್ರಮಗಳನ್ನು ಅನುಸರಿಸಿ ಅವರ ಊರಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ ,ಬಜರಂಗದಳದ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ,ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕುಮಾರ್ ಜೈನ್,ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾದ ಕೃಷ್ಣಪ್ರಸಾದ್ ಬೆಟ್ಟ,ಪ್ರಸಾದ್ ಬೆಟ್ಟ, ಬಜರಂಗದಳ ಪುತ್ತೂರು ಪ್ರಖಂಡ ಸಹ ಸಂಚಾಲಕ ಜಯಂತ್ ಕುಂಜೂರು ಪಂಜ,ಪುತ್ತೂರು ಪ್ರಖಂಡ ಸುರಕ್ಷಾ ಪ್ರಮುಖ್ ಪ್ರವೀಣ್ ಕಲ್ಲೇಗ,ಪುತ್ತೂರು ನಗರ ಸಂಚಾಲಕ್ ಮಿಥುನ್ ತೆಂಕಿಲ,ವಿಶ್ವ ಹಿಂದೂ ಪರಿಷತ್ ನಗರ ಕಾರ್ಯದರ್ಶಿ ರೂಪೇಶ್ ಮುರ, ಕಾರ್ಯಕರ್ತರಾದ ಪ್ರಜ್ವಲ್ ಬನ್ನೂರು,ಗುರುರಾಜ್ ಬಲ್ನಾಡ್,ಕಾರ್ತಿಕ್ ಬನ್ನೂರು ಉಪಸ್ಥಿತರಿದ್ದರು ಹಾಗೂ ಪುತ್ತೂರಿನ ಹಲವಾರು ಸಹೃದಯಿ ದಾನಿಗಳು ಸಂಘಟನೆಯ ಈ ಸೇವಾ ಕಾರ್ಯದ ಸಂದರ್ಭದಲ್ಲಿ ಹಲವು ರೀತಿಯಲ್ಲಿ ನೆರವಾಗಿದ್ದಾರೆ