Monday, January 27, 2025
ಸುದ್ದಿ

Breaking News : ವಿದೇಶದಿಂದ ಆಗಮಿಸಿದ ಪುತ್ತೂರಿನ ಕಲ್ಲರ್ಪೆಯ ಶಂಕಿತ ಯುವಕನಿಗೆ ಕೊರೋನಾ ನೆಗೆಟಿವ್ – ಕಹಳೆ ನ್ಯೂಸ್

ಸಂಪ್ಯ: ವಿದೇಶದಿಂದ ಆಗಮಿಸಿದ ಕಲ್ಲರ್ಪೆ ಯುವಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮಾ. 30ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಾ. 31ರಂದು ಮಧ್ಯಾಹ್ನ ಕೊರೋನಾ ನೆಗೆಟಿವ್ ಎಂಬ ವರದಿ ಕೈ ಸೇರಿದೆ ಎಂದು ಆರ್ಯಾಪು ಪಂಚಾಯತ್ ಸದಸ್ಯ ಇಸ್ಮಾಯಿಲ್ ಕಲ್ಲರ್ಪೆ ಖಾಸಗಿ ಪ್ರತಿಕೆಯೊಂದಕ್ಕೆ ತಿಳಿಸಿದ್ದಾರೆ.

ಮೂಲತಃ ಮರಿಕೆ ನಿವಾಸಿ, ಇದೀಗ ಕಲ್ಲರ್ಪೆ ಬಳಿ ವಾಸವಾಗಿರುವ ಯುವಕನನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೋನಾ ವೈರಸ್ ಸೋಂಕು ವ್ಯಾಪಕತೆ ಪಡೆದುಕೊಂಡ ಹಿನ್ನೆಲೆಯಲ್ಲಿ ಕಲ್ಲರ್ಪೆಯ ಯುವಕ ವಿದೇಶದಿಂದ ಊರಿಗೆ ವಾಪಾಸಾಗಿದ್ದರು. ಹಿಂದಿರುಗುವಾಗ ಕೈಗೆ ಸೀಲ್ ಹಾಕಿದ್ದು, ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು.
ಮಾ. 29ರಂದು ರಾತ್ರಿ ಕೆಮ್ಮು ಹಾಗೂ ಅಲ್ಪ ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಆದ್ದರಿಂದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೋಮವಾರ ಮಧ್ಯಾಹ್ನ ಆಂಬುಲೆನ್ಸ್‌ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರವೇ ಕೊರೋನಾ ವೈರಸ್ ಸೋಂಕಿನ ಪರೀಕ್ಷೆಗೆ ಯುವಕನನ್ನು ಒಳಪಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ವರದಿ ಕೈ ಸೇರಿದ್ದು, ನೆಗೆಟಿವ್ ಎಂಬ ವರದಿ ಬಂದಿದೆ ಎಂದು ಹೇಳಲಾಗಿದೆ. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು