Recent Posts

Monday, January 20, 2025
ಸುದ್ದಿ

Breaking News : ನಕಲಿ ಮಾಸ್ಕ್ ಮಾರಾಟ ಸ್ಥಳದ ಮೇಲೆ ಸಿಸಿಬಿ ದಾಳಿ, 12,000 ನಕಲಿ ಎನ್95 ಮಾಸ್ಕ್’ಗಳು ವಶಕ್ಕೆ – ಕಹಳೆ ನ್ಯೂಸ್

ಬೆಂಗಳೂರು: ಎನ್95 ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ಕೇಂದ್ರೀಯ ಅಪರಾಧ ತನಿಖಾದಳದ ಅಧಿಕಾರಿಗಳು (ಸಿಸಿಬಿ) ದಾಳಿ ನಡೆಸಿದ್ದು,12,000 ನಕಲಿ ಮಾಸ್ಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ ರಾತ್ರಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 12,000 ನಕಲಿ ಮಾಸ್ಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಕಲಿ ಮಾಸ್ಕ್ ಗಳು ಸಾಧಾರಣ ಬಟ್ಟೆಯಿಂದ ಮಾಡಿರುವ ಮಾಸ್ಕ್ ಗಳಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಮಾಸ್ಕ್ ಗಳ ಮೇಲೆ ಎನ್95 ನಕಲಿ ಸೀಲ್ ಹಾಕಿರುವುದು ಕಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಕಲಿ ಮಾಸ್ಕ್ ಗಳಾಗಿದ್ದರೂ ಈ ಮಾಸ್ಕ್ ಗಳನ್ನು ನಿಜವಾಗ ಎನ್95 ಮಾಸ್ಕ್ ಗಳಂತೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ನಡೆಸಿ, ನಕಲಿ ಮಾಸ್ಕ್ ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.