Recent Posts

Monday, January 20, 2025
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆ; ರಾಜ್ಯದಲ್ಲಿ 98ಕ್ಕೇರಿದ ಸೋಂಕಿತರ ಸಂಖ್ಯೆ – ಕಹಳೆ ನ್ಯೂಸ್

ಮಂಗಳೂರು,ಮಾ 31 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೮ ಕ್ಕೇರಿದೆ. ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೆ ಒಟ್ಟು 10 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಈ ಪೈಕಿ ದ.ಕ ಉ.ಕನ್ನಡ ಚಿಕ್ಕಬಳ್ಳಾಪುರ ಒಬ್ಬರಿಗೆ ಬೆಂಗಳೂರು ಹಾಗು ಮೈಸೂರಿನಲ್ಲಿ ತಲಾ ಇಬ್ಬರಲ್ಲಿ ಪತ್ತೆಯಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಮಾರ್ಚ್ 18ರಂದು ವಿದೇಶದಿಂದ ಬಂದಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೆನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ 28ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಪರೀಕ್ಷಾ ವರದಿ ಮಾರ್ಚ್ 31ರ ಮಂಗಳವಾರ ಲಭ್ಯವಾಗಿದ್ದು, ಪಾಸಿಟಿವ್ ಎಂಬುವುದಾಗಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇನ್ನು ದ.ಕ. ಜಿಲ್ಲೆಯ ಮಟ್ಟಿಗೆ ಕಳೆದ 3 ದಿನಗಳಿಂದ ನೆಗೆಟಿವ್ ಪ್ರಕರಣಗಳೇ ವರದಿಯಾಗುತ್ತಿತ್ತು. ಇದರಿಂದಾಗಿ ಜನತೆ ಕೂಡ ನಿರಾಳರಾಗಿದ್ದರು. ಆದರೆ, ಇಂದು ಹೊಸದೊಂದು ಪ್ರಕರಣ ವರದಿಯಾಗುವ ಮೂಲಕ ಜನ ಆತಂಕಕ್ಕೆ ಕಾರಣವಾಗಿದೆ.

ಮಂಗಳವಾರ ಲಭ್ಯವಾದ ವರದಿ:
ಒಟ್ಟು ಸ್ಕ್ರೀನಿಂಗ್ ಒಳಪಟ್ಟವರು                –     41 ಮಂದಿ
ಮನೆಯಲ್ಲಿ ನಿಗಾದಲ್ಲಿರುವವರು                 –    5875 ಮಂದಿ
ಇ ಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು    –    28 ಮಂದಿ
28 ದಿನಗಳ ನಿಗಾ ಪೂರೈಸಿದವರು            –    169 ಮಂದಿ
ಪರೀಕ್ಷೆಗೆ ಒಳಪಡಿಸಿದವರು                     –    17 ಮಂದಿ
ಇಂದು ಲಭ್ಯವಾದ ಪರೀಕ್ಷಾ ಮಾದರಿಗಳು       –     9
ಪಾಸಿಟಿವ್ ವರದಿ                              –     1
ನೆಗೆಟಿವ್ ವರದಿ                               –     8