Saturday, November 23, 2024
ಸುದ್ದಿ

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ; ತಂತ್ರಿಗಳ ನೇತೃತ್ವದಲ್ಲಿ ಅರ್ಚಕರು ಹಾಗೂ ಸೀಮಿತ ನೌಕರರಿಂದ ಜಾತ್ರೆಗೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ಐತಿಹಾಸಿಕ ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೆಗೆ ಇಂದು ಏಪ್ರಿಲ್ 1ರಂದು ಗೊನೆ ಮುಹೂರ್ತ ನಡೆಯಿತು. ಸುಮಾರು 9.35ರ ಮುಂಜಾನೆ ಮುಹೂರ್ತದಲ್ಲಿ ಮುಖ್ಯ ಅರ್ಚಕರಾದ ವೆಂಕಟೇಶ ಸುಬ್ರಮಣ್ಯ ಭಟ್ ಹಾಗೂ ವಸಂತ ಕುಮಾರ್ ಕೆದಿಲಾಯ ಜೊತೆಗೂಡಿ ಗೊನೆ ಮುಹೂರ್ತ ನೆರೆವೇರಿಸಿದರು. ಈ ವೇಳೆ ಶಾಸಕರಾದ ಸಂಜೀವ ಮಟಂದೂರು, ಜಗನ್ನಿವಾಸ್ ರಾವ್, ಆಡಳಿತ ಅಧಿಕಾರಿ ಲೋಕೇಶ್ ಪಿ, ನವೀನ್ ಭಂಡಾರಿ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತಿತ್ತರರು ಉಪಸ್ಥಿತರಿದ್ದರು.

ಕೊರೋನಾ ಮಹಾಮಾರಿ ವಿಶ್ವವ್ಯಾಪ್ತಿಯಾಗಿ ಹರಡಿರುವ ಹಿನ್ನಲೆ ಸರ್ಕಾರದ ಲಾಕ್ ಡೌನ್ ಆದೇಶದಿಂದಾಗಿ ಜನರ ಅರೋಗ್ಯ ಕ್ಷೇಮಕ್ಕೆ ಈ ಬಾರಿಯ ಜಾತ್ರೆಯು ತಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಚಕರು ಮತ್ತು ಸೀಮಿತ ನೌಕರರಿಂದ ನೆರವೇರಲಿದ್ದು ಭಕ್ತಾದಿಗಳಿಗೆ ಯಾವುದೇ ಅವಕಾಶವಿರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು