Recent Posts

Sunday, January 19, 2025
ರಾಜಕೀಯ

#FreeKasaragodFromKL ‘ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾಗಲಿ’- ಅಭಿಯಾನ ಪ್ರಾರಂಭ – ಕಹಳೆ ನ್ಯೂಸ್

ಕಾಸರಗೋಡು, ಏ 01 : ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇರಳ ರಾಜ್ಯ ಸರಕಾರ ನಿರ್ಲಕ್ಷ್ಯ ದಿಂದ ಹೀಗಾಗುತ್ತಿದ್ದು, ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲು ಅಲ್ಲಿನ ಯುವ ಸಮುದಾಯ ಇದೀಗ ಟ್ವಿಟರ್ ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಮುಂದಾಗಿದ್ದಾರೆ.

#MakeUtOfKasaragod, #FreeKasaragodFromKL ಎಂಬ ಹ್ಯಾಷ್ ಟ್ಯಾಗ್ ಮೂಲಕ ಕೇಂದ್ರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಕಾಸರಗೋಡು ಆಟಕ್ಕುಂಟು ಲೆಕ್ಕಕ್ಕಿಲ್ಲ, ಕೇರಳಕ್ಕೆ ಬೇಡವಾದ ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾಗಲಿ, ಕನ್ನಡಿಗರು ಮತ್ತು ತುಳುವರು ಹೆಚ್ಚಿರುವ ಕಾಸರಗೋಡನ್ನು ಕೇರಳ ನಿರ್ಲಕ್ಷ್ಯಿಸುತ್ತಿದೆ ಎಂದು ಟ್ವೀಟ್ ಮಾಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು