Friday, September 20, 2024
ಸುದ್ದಿ

ನಿಜಾಮುದ್ದೀನ್ ಮರ್ಕಜ್‍ನಿಂದ ವಾಪಸ್ಸಾಗಿದ್ದ ಬೀದರ್ ನ 27 ಜನರ ಪೈಕಿ11 ಜನರಲ್ಲಿ ಕೊರೋನಾ ಸೋಂಕು ಪತ್ತೆ ; ಕರ್ನಾಟಕಕ್ಕೆ ಹರಡಿದ ನಿಜಾಮುದ್ದೀನ್ ನಂಜು! – ಕಹಳೆ ನ್ಯೂಸ್

ಬೀದರ್: ನಿಜಾಮುದ್ದೀನ್ ನ ಮರ್ಕಜ್ ನಿಂದ ವಾಪಸ್ಸಾಗಿದ್ದ 27 ಜನರ ಪೈಕಿ 11 ಜನರು ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ 1500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಈ ಪೈಕಿ ಬೀದರ್ ಗೆ ವಾಪಸ್ಸಾಗಿದ್ದ 27 ಜನರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು. ಪರೀಕ್ಷೆಯಲ್ಲಿ 11 ಜನರು ಸೋಂಕಿಗೆ ತುತ್ತಾಗಿದ್ದು ಇನ್ನುಳಿದವರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹದೇವ್ ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಮೂರು ಪಟ್ಟಿ ಬಂದಿವೆ. ಮಾ.8ರಿಂದ 20ರವರೆಗಿನ ಅವಧಿಯಲ್ಲಿ ರಾಜ್ಯದಿಂದ 1,500 ಮಂದಿ ನಿಜಾಮುದ್ದೀನ್’ಗೆ ಆಗಮಿಸಿರಬಹುದು ಎನ್ನಲಾದ 1,500 ಮಂದಿ ಪಟ್ಟಿ ಇದಾಗಿದ್ದು, ಈ ಪೈಕಿ 800ಮಂದಿಯನ್ನು ಈಗಾಗಲೇ ಪತ್ತೆಹಚ್ಚಿದ್ದೇವೆ. ಉಳಿದ 700 ಮಂದಿಯನ್ನು ಗುರುವಾರ ರಾತ್ರಿಯೊಳಗೆ ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲಿದ್ದೇವೆ. ಇನ್ನು ತಪಾಸಣೆಗೆ ಒಳಪಡಿಸಿರುವ 800 ಮಂದಿಯಲ್ಲಿ 143 ಮಂದಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಗಂಟಲು ದ್ರವದ ಸ್ವ್ಯಾಬ್ ಅನ್ನು ಪರೀಕ್ಷೆಗೆ ರವಾನಿಸಲಾಗಿದೆ. ಅಲ್ಲದೆ ಇಷ್ಟೂಮಂದಿಯನ್ನು ಸರ್ಕಾರಿ ನಿಯಂತ್ರಣದಲ್ಲಿರುವ ಮಾಸ್ ಕ್ವಾರಂಟೈನ್’ಗೆ ಸ್ಥಳಾಂತರ ಮಾಡಲಾಗಿದೆ.

ಜಾಹೀರಾತು