Friday, September 20, 2024
ಸುದ್ದಿ

Breaking News : ನಿಜಾಮುದ್ದೀನ್- ಕ್ವಾರಂಟೈನ್ ನಲ್ಲಿದ್ದವರಿಂದ ದಾದಿ,ವೈದ್ಯರ ಮೇಲೆ ಉಗುಳಿ, ಕಲ್ಲೆಸೆದು ‘ಅಮಾನವೀಯ ವರ್ತನೆ ‘ – ಕಹಳೆ ನ್ಯೂಸ್

ದೆಹಲಿ, ಏ 2 : ಕೊರೊನಾ ಹರಡದಂತೆ ದೆಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ಹುಡುಕಿ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದ್ದು, ಅವರ ತಪಾಸಣೆ ಮತ್ತು ಚಿಕಿತ್ಸೆಯ ಸಮಯದಲ್ಲಿ ಇವರು ವೈದ್ಯರು, ದಾದಿಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಮಾತ್ರವಲ್ಲದೆ ವೈದ್ಯಕೀಯ ಸಿಬ್ಬಂದಿಯ ಮೇಲೆ ಉಗುಳಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ದೆಹಲಿಯ ತಬ್ಲಿಘಿ ಜಮಾಅತ್ ಕೇಂದ್ರ ಕಚೇರಿಯಾದ ನಿಜಾಮುದ್ದೀನ್ ಮಾರ್ಕಾಜ್‌ನಿಂದ ಸ್ಥಳಾಂತರಿಸಿ ರೈಲ್ವೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ. 167 ಮಂದಿ ಕ್ವಾರಂಟೈನ್​​ನಲ್ಲಿಇದ್ದು ಇವರ ಆರೋಗ್ಯ ತಪಾಸಣೆಗೆ ಹೋದ ವೈದ್ಯರು, ನರ್ಸ್​​ಗಳು, ಆರೋಗ್ಯ ಸಿಬ್ಬಂದಿ ಬಳಿ ಹೀನಾಯವಾಗಿ ವರ್ತಿಸುತ್ತಿದ್ದಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಮೇಲೆ ಎಂಜಲು ಉಗುಳುತ್ತಿದ್ದಾರೆ. ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ರೈಲು ಇಲಾಖೆ ವಕ್ತಾರ ಬುಧವಾರ ರಾತ್ರಿ ತಿಳಿಸಿದ್ದಾರೆ.

ಜಾಹೀರಾತು

ಮಾ.13ರಿಂದ 15ರವರೆಗೆ ತಬ್ಲಿಘಿ ಜಮಾತ್​ ನಡೆಸಿದ್ದ ಸಭೆಯಲ್ಲಿ 3000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಪಾಲ್ಗೊಂಡ ಹಲವರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ.

ಇವರು ಸಿಕ್ಕಸಿಕ್ಕಲ್ಲಿ ಓಡಾಡುತ್ತಿದ್ದು, ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ. ಮಾತ್ರವಲ್ಲದೆ ಅಮಾನವೀಯ ವರ್ತಿಸುತ್ತಿದ್ದು ಸೂಕ್ತ ರಕ್ಷಣೆ ನೀಡಿ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಬಳಿ ಮನವಿ ಮಾಡಿದ್ದೆವು. ಹಾಗಾಗಿ ಆರು ಸಿಆರ್​ಪಿಎಫ್​ ಸಿಬ್ಬಂದಿ, ದೆಹಲಿ ಪೊಲೀಸ್​ ಪೇದೆಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ರೈಲು ಇಲಾಖೆ ವಕ್ತಾರ ದೀಪಕ್​ ಕುಮಾರ್ ಮಾಹಿತಿ ನೀಡಿದ್ದಾರೆ.