ಕೂಡಿಟ್ಟ ‘ಪಾಕೆಟ್ ಮನಿ’ ಕೊರೊನಾ ಹೋರಾಟಕ್ಕಾಗಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ ‘ಮಂಗಳೂರಿನ 5ರ ಪುಟಾಣಿ’ – ಕಹಳೆ ನ್ಯೂಸ್
ಮಂಗಳೂರು,ಏ 2 : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಪುಟಾಣಿಯೊಬ್ಬ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಾನೂ ಕೂಡಿಟ್ಟ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ ಎಲ್ಲರಿಂದಲೂ ಶಹಬ್ಬಾಷ್ ಅನ್ನಿಸಿಕೊಂಡಿದ್ದಾನೆ.
ಕೊರೊನಾ ವೈರಸ್ ಮಹಾಮಾರಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಸರ್ಕಾರ ಕೋರಿದ ಕೊರೊನಾ ಹೋರಾಟದ ಆರ್ಥಿಕ ನೆರವಿಗೆ ಸ್ಪಂದಿಸಿ ಕ್ರೀಡಾಪಟುಗಳು, ಉದ್ಯಮಿ, ಸಿನಿಮಾ ತಾರೆಯರ ಕಡೆಯಿಂದ ಸಾಕಷ್ಟು ಅರ್ಥಿಕ ನೆರವು ಹರಿದುಬರುತ್ತಿದೆ.
ತನ್ನದೂ ಈ ಹೋರಾಟಕ್ಕೆ ಅಳಿಲ ಸೇವೆ ಇರಲಿ ಎಂದು ಐದು ವರ್ಷದ ಬಾಲಕನೊಬ್ಬ ತಾನು ಪಿಗಿಬ್ಯಾಂಕ್ ನಲ್ಲಿ ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ನಗರದ ಫಳ್ನೀರ್ ನ ಅತಾ-ವುರ್-ರೆಹ್ಮಾನ್ ಎಂಬ ಐದು ವರ್ಷದ ಬಾಲಕ ಯನೆಪೊಯ ಮೊಂಟೆಸ್ಸರಿ ಶಾಲೆಯನ್ನು ಓದುತ್ತಿದ್ದು ತಾನು ಹುಂಡಿಯಲ್ಲಿ ಸಂಗ್ರಹಿಸಿದ್ದ ಹಣವನ್ನು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇರ್ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ. ಭಟ್ಕಳ ಮೂಲದವರಾದ ಅತಾ-ವುರ್-ರೆಹ್ಮಾನ್ ಪೋಷಕರು ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಪೋಷಕರು ರೆಹ್ಮಾನ್ ನನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದಿದ್ದು ಈ ವೇಳೆ ಬಾಲಕ ಜಿಲ್ಲಾಧಿಕಾರಿಯವರಿಗೆ ಹಣ ವರ್ಗಾಯಿಸಿದ್ದಾರೆ.