Recent Posts

Sunday, January 19, 2025
ಸುದ್ದಿ

Breaking News : ಕೇರಳ – ಕರ್ನಾಟಕ ಗಡಿ ಬಂದ್ : ಸರಕಾರದ ಆದೇಶ ಮೀರಿ ಇತಿಹಾಸ ಪ್ರಸಿದ್ಧ ಕುಕ್ಕೇ ಸುಬ್ರಹ್ಮಣ್ಯಕ್ಕೆ ಕಾಸರಗೋಡಿನಿಂದ ಬಂದ ಮಹಿಳೆ – ಸಾರ್ವಜನಿಕರಲ್ಲಿ ಆತಂಕ – ಕಹಳೆ ನ್ಯೂಸ್

ಸುಬ್ರಹ್ಮಣ್ಯ ; ಕೇರಳ ಮತ್ತು ಕರ್ನಾಟಕ ಗಡಿಯನ್ನು ಸರಕಾರ ಈಗಾಗಲೇ ಮುಚ್ಚಿದ್ದು, ತೀವ್ರ ಚರ್ಚೆಯಾಗುತ್ತಿದೆ,ಈ ಹೊತ್ತಿನಲ್ಲಿ ಕುಕ್ಕೇ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿಗೆ ಕಾಸರಗೋಡು ಮುಳ್ಳೇರಿಯಾದಿಂದ ಸರ್ಕಾರದ ಆದೇಶ ಮೀರಿ ಬಬ್ಬಕೆ ಮಹಿಳೆ ಬಂದಿದ್ದಾಳೆ.

ಕಾಸರಗೋಡು ಹಾಗೂ ಮುಳ್ಳೇರಿಯಾ ಭಾಗದಲ್ಲಿ ಇದಾಗಲೇ ಹೆಚ್ಚಾಗಿ ಕೊರೊನ ಹರಡುತ್ತಿದ್ದು, ಹೆಚ್ಚು ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದೆ, ಎಲ್ಲಾ ಕಡೆಗಳಲ್ಲಿ ನಿಷೇದಾಜ್ಞೆ ಇರುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕ್ಕೆ ಆಗಮಿಸಿದ್ದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳ ಹಾಗೂ ಕರ್ನಾಟಕ ಭಾಗ ಸಂಪೂರ್ಣ ಬಂದ್ ಆಗಿದ್ದು,
ಯಾರು ಸಂಚರಿಸದ ಸಂದರ್ಭದಲ್ಲಿ ಹೇಗೆ ಬಂದರು ಎಂಬುದು ಆತಂಕಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಪೊಲೀಸ್ ಅಧಿಕಾರಿಗಳು ಹಾಗು ಅರೋಗ್ಯ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಮನೆಯಲ್ಲೇ ಇರಬೇಕು ಎಂದು ಸೂಚನೆ ನೀಡಿದ್ದಾರೆ.

ಪಂಜದಲ್ಲಿ ಕುಂದಾಪುರದಿಂದ ಬಂದ ಯುವಕನ ಮೇಲೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಇಲ್ಲಿ ಯಾಕೆ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಪಂಜದಲ್ಲಿ ಬಾಗಲಕೋಟೆ ಯಿಂದ ಬಂದ ಯುವಕನ ಮೇಲೆ ಪ್ರಕರಣ ಧಾಖಲಾಗಿದೆ.

ಇಲ್ಲಿ ಯಾಕೆ ಸಂಬಂಧ ಪಟ್ಟ ಇಲಾಖೆ ಗಮನಹರಿಸಿಲ್ಲ ಎಂಬುದು ಪ್ರಶ್ನೆ ಯಾಗಿದೆ.