Recent Posts

Sunday, January 19, 2025
ಸುದ್ದಿ

Breaking News : ಬೆಳ್ತಂಗಡಿ ತಾಲೂಕಿನಲ್ಲಿ ಅನಗತ್ಯ ವಾಹನ ಓಡಾಟ, ಒಂದೇ ದಿನ 35 ವಾಹನಗಳ ವಶಕ್ಕೆ ಪಡೆದು ದಕ್ಷತೆ ಮೆರೆದ ಪೋಲೀಸರು – ಕಹಳೆ ನ್ಯೂಸ್

ಬೆಳ್ತಂಗಡಿ: ದೇಶದಾದ್ಯಂತ  ವ್ಯಾಪಕವಾಗಿ ಹರಡುತ್ತಿರುವ ಕೊರೋನಾವನ್ನು ತಡೆಯುವುದು ಸವಾಲಾದರೆ ಮತ್ತೊಂದೆಡೆ ಅನಗತ್ಯ ವಾಹಾನ ಓಡಾಟವನ್ನು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಿರುವುದರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಇಂದು 35 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಳ್ತಂಗಡಿ ತಹಸೀಲ್ದಾರ್ ಗಣಪತಿ ಶಾಸ್ತ್ರೀ ಹಾಗೂ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಎಸ್‌ಐ ನಂದಕುಮಾರ್ ಎಂ.ಎಂ., ಪುಂಜಾಲಕಟ್ಟೆ ಎಸ್‌ಐ ಸೌಮ್ಯ, ಧರ್ಮಸ್ಥಳ ಠಾಣೆ ಎಸ್‌ಐ ಓಡಿಯಪ್ಪ, ಸಂಚಾರಿ ಠಾಣೆ ಎಸ್‌ಐ ಪವನ್ ಕುಮಾರ್ ಹಾಗೂ ವೇಣೂರು ಎಸ್‌ಐ ಲೋಲಾಕ್ಷ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದರು.
ವಶ ಪಡಿಸಿಕೊಂಡಿರುವ 35 ವಾಹನಗಳಿಂದ ಸುಮಾರು 28,500 ರೂ. ವರೆಗೆ ದಂಡ ವಸೂಲಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು