Recent Posts

Sunday, January 19, 2025
ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಕಕ್ಕಿಂಜೆಯ ಕಾಮುಕ ‘ ಬೆತ್ತಲೆ ಶರೀಫ್ ‘ ವಿಡಿಯೋ ವೈರಲ್ ಪ್ರಕರಣ ; ಶರೀಫ್ ನಮ್ಮ ಕಾರ್ಯಕರ್ತನಲ್ಲ – ಅವನನ್ನು ವಜಾಗೊಳಿಸಿದ್ದೇವೆ – SKSSF ಸ್ಪಷ್ಟನೆ – ಕಹಳೆ ನ್ಯೂಸ್

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಸಿ.ಎಂ. ಜನರಲ್ ಸ್ಟೋರ್ ಅಂಗಡಿಯ ಮಾಲೀಕನು ಶರೀಫ್ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಸ್, ಮಹಿಳೆಯೊಬ್ಬಳ ಮನೆಗೆ ತೆರಳಿ ಆಕೆ ಸ್ನಾನ ಮಾಡುತ್ತಿದ್ದಾಗ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿ ಸಿಕ್ಕಿಬಿದ್ದಿದ್ದಾನೆ. ಹೆಂಗಸರನ್ನು ಪೀಡಿಸುತ್ತಿದ್ದ ಕಾಮುಕ ಶರೀಫ್ ಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಎಸ್ ಕೆ ಎಸ್ ಎಸ್ ಎಫ್ ನ ಸಕ್ರೀಯ ಕಾರ್ಯಕರ್ತನಾಗಿದ್ದು ಈತನಿಗೆ ಕಕ್ಕಿಂಜೆಯ ಘಟಕದ ಜವಾಬ್ದಾರಿಯೂ ಇತ್ತು, ಆದರೆ, ಕೆಲ ತಿಂಗಳುಗಳ ಹಿಂದೆ ಬೇರೊಂದು ಹೆಂಗಸಿನ ಪ್ರಕರಣದಲ್ಲಿ ಧರ್ಮದೇಟು ತಿಂದ ಸಂಧರ್ಭದಲ್ಲಿ ಆತನನ್ನು ಉಚ್ಚಾಟಿಸಲಾಗಿದೆ ಎಂದು SKSSF ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಲಾಕ್ ಡೌನ್ ಮಧ್ಯೆ ಕಾಮುಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ SKSSF ಹೆಸರು ಜೊತೆ ಸೇರಿಕೊಂಡ ಹಿನ್ನಲೆಯಲ್ಲಿ ಸಂಘಟನೆಯ ಮುಖಂಡರು ಈ ಅಪಪ್ರಚಾರದ ಕುರಿತು ಠಾಣೆಗೆ ದೂರು ನೀಡಿದ್ದಾರೆ. ಹಾಗೂ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. SKSSF ಗೂ ಕಾಮುಕ ಶರೀಫಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.