Sunday, January 19, 2025
ಸಿನಿಮಾ

ಕಪ್ಪು ಕುದುರೆ ಮೇಲೆ ಅರೆಬೆತ್ತಲೆ ಫೋಸಲ್ಲಿ ಸನ್ನಿ ಹೊರಟ್ಟಿದೆಲ್ಲಿಗೆ..? ಹೋಮ್ ಕ್ವಾರೆಂಟೈನ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಸನ್ನಿ ಲಿಯೋನ್ – ಕಹಳೆ ನ್ಯೂಸ್

ನವದೆಹಲಿ: ಹೋಮ್ ಕ್ವಾರೆಂಟೈನ್ ನಡುವೆ ಮಾದಕ ಚಲುವೆ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು, ದಿನಕ್ಕೆ ನಾಲ್ಕೈದು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕುತ್ತಿದ್ದಾರೆ.

ಸನ್ನಿ ಲಿಯೋನ್ ತಾವು ಮನೆಯಲ್ಲಿ ಕಾಲ ಕಳೆಯುತ್ತಿರುವ ಕುರಿತು ಅಪ್‍ಡೇಟ್ ನೀಡುತ್ತಿದ್ದು, ಇದರ ಜೊತೆಗೆ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಿಂದಿರಲು ಸಹ ಯತ್ನಿಸುತ್ತಿದ್ದಾರೆ. ವಿವಿಧ ಅತಿಥಿಗಳೊಂದಿಗೆ ಲೈವ್ ವಿಡಿಯೋ ಚಾಟ್ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಈ ಕುರಿತು ಪೋಸ್ಟ್ ಸಹ ಮಾಡಿದ್ದು, ಲಾಕಡ್ ಅಪ್ ವಿತ್ ಸನ್ನಿ ಎಂಬ ಟೈಟಲ್‍ನಲ್ಲಿ ಲೈವ್ ವಿಡಿಯೋ ಚಾಟ್ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್‍ಡೌನ್ ಹಿನ್ನೆಲೆ ಅಭಿಮಾನಿಗಳು ಸಹ ಈ ವಿಡಿಯೋ ನೋಡುತ್ತಿದ್ದು, ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಮೂಲಕ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು, ಲಾಕ್‍ಡೌನ್ ದಿನಗಳನ್ನು ಕಳೆಯುತ್ತಿದ್ದಾರೆ. ಇದನ್ನು ಹೊರತುಪಡಿಸಿ ಎಂದಿನಂತೆ ಹಾಟ್ ಫೋಟೋಗಳನ್ನು ಅಪ್‍ಲೋಡ್ ಮಾಡುತ್ತಿದ್ದಾರೆ.

ಬೇಸಿಗೆ ಹಿನ್ನೆಲೆ ನೀರಿನಲ್ಲಿ ಕುಳಿತಿರುವ ಫೋಟೋವನ್ನು ಹಾಕಿದ್ದು, ಇನ್ನೂ 12ದಿನಗಳ ದಿನಗಳ ಸಮ್ಮರ್ ಕಳೆಯಿರಿ ಎಂಬ ಸಾಲುಗಳನ್ನು ಬರೆದಿದ್ದರು. ಮಾತ್ರವಲ್ಲದೆ ಕಿಸ್ಸಿಂಗ್ ವಿಡಿಯೋ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಕಿಸ್ ಕೊಟ್ಟು, ಕಣ್ಣು ಹೊಡೆದಿರುವ ವಿಡಿಯೋ ಹಾಕಿ, ಕಿಸ್….ಕಿಸ್….! ಮಾರ್ನಿಂಗ್ ಎವರಿಒನ್ ಎಂದು ಬರೆದುಕೊಂಡಿದ್ದಾರೆ.

ಇದೀಗ ಬಿಕಿನಿ ತೊಟ್ಟು ಕಪ್ಪು ಕುದುರೆಯನ್ನೇರಿರುವ ಫೋಟೋ ಹಾಕಿದ್ದು, ಫುಲ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಕುದುರೆ, ಬಿಳಿ ಮೈಮಾಟ ಯುವ ಸಮೂಹವನ್ನು ಸೆಳೆದಿದ್ದು, ಹುಡುಗರು ಸೂಪರ್ ಡಿಯರ್, ಯು ಆರ್ ಅಮೇಜಿಂಗ್ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಈ ಪೋಸ್ಟ್ ಸಾಕಷ್ಟು ಸದ್ದು ಮಾಡುತ್ತಿದೆ.