ಬೀಟ್ ಪೊಲೀಸರಿಂದ ಗ್ರಾಮಸ್ಥರು ಮೆಚ್ಚುವಂತಹ ಜನಸೇವೆ.
ವೇಣೂರು ಪೊಲೀಸ್ ಠಾಣಾ ಅಳದಂಗಡಿ ಮತ್ತು ಸುಲ್ಕೇರಿಮೊಗ್ರು ಬೀಟ್ ಪೊಲೀಸರ “ಜನಸ್ನೇಹಿ ಪೊಲೀಸ್ -ಅರುವ ಮೊಗರು’ವಾಟ್ಸಾಪ್ ಗ್ರೂಪ್ ನ ವತಿಯಿಂದ ಲಾಕ್ ಡೌನ್ ಸಮಸ್ಯೆಯಿಂದ ತನ್ನ ಬೀಟ್ ವ್ಯಾಪ್ತಿಯ ಬಡಗಕಾರಂದೂರು ಮತ್ತು ಸುಲ್ಕೇರಿ ಮೊಗ್ರು ಗ್ರಾಮಗಳು ಅಲ್ಲದೇ ಅಳದಂಗಡಿ ಸುತ್ತಲಿನ ಪಿಲ್ಯ,ಕುದ್ಯಾಡಿ ಗ್ರಾಮಗಳಲ್ಲಿ ಅನ್ನಕ್ಕಾಗಿ ತೊಂದರೆಪಡುವ ಕುಟುಂಬಗಳಿದ್ದಲ್ಲಿ ಅವರಿಗಾಗಿ “ಹಸಿವು- ಅನ್ನದ ತುತ್ತು’ ಸೇವಾಯೋಜನೆಯನ್ನು ಮಾಡಬೇಕೆಂದು ಚಿಂತಿಸಿ ಅಭಿವ್ಯಕ್ತಿ ಪಡಿಸಿದಾಗ ಗ್ರೂಪ್ ನ ಸೇವಾಭಾವನೆಯ ಬಹುತೇಕ ಮಂದಿ ಸಕರಾತ್ಮಕವಾಗಿ ಸ್ಪಂದಿಸಿ ಸುಮಾರು 25 ಕ್ವಿಂಟಾಲ್ ಅಕ್ಕಿ ಮತ್ತು 250 ಡಬ್ಬ ಉಪ್ಪಿನಕಾಯಿಗೆ ಬೇಕಾಗುವಷ್ಟು ಸಹಕಾರ ಬಂದಿರುತ್ತದೆ.
ಬೀಟ್ ಪೊಲೀಸ್ ಪ್ರಶಾಂತ್ ಕುಮಾರ್ ರವರು ಕೂಡಾ ಈ ಸೇವಾಯೋಜನೆಗೆ 1 ಕ್ವಿಂಟಾಲ್ ಅಕ್ಕಿಯನ್ನು ನೀಡಿರುತ್ತಾರೆ.
ಇದರ ಜೊತೆ ಊರಿನ ಖ್ಯಾತ ವೈದ್ಯ ದಂಪತಿಗಳಾದ ಡಾ ಶಶಿಧರ ಡೊಂಗ್ರೆ ಮತ್ತು ಡಾ ಶ್ರೀಮತಿ ಸುಷ್ಮಾ ಡೊಂಗ್ರೆಯವರು ನಮ್ಮ ಸೇವಾಯೋಜನಗೆ ಸುಮಾರು 10 ಕ್ವಿಂಟಾಲ್ ಅಕ್ಕಿಯನ್ನು ಒದಗಿಸಿಕೊಟ್ಟಿರುತ್ತಾರೆ.
ಈಗಾಗಲೇ ಈ ನಾಲ್ಕು ಗ್ರಾಮಗಳಿಂದ ಸುಮಾರು 100-150 ಆಶಕ್ತ ಬಡಕುಟುಂಬಗಳ ವಿವರ ಲಭಿಸಿದ್ದು ಈಗಾಗಲೇ ಸುಮಾರು 60 ಮನೆಗಳಿಗೆ ಅಕ್ಕಿ ಮತ್ತು ಉಪ್ಪಿನಕಾಯಿ ವಿತರಿಸಲಾಗಿದೆ.ಅಗತ್ಯತೆಯನ್ನು ಪರಿಗಣಿಸಿ ವ್ಯಾಟ್ಸಾಪ್ ಗ್ರೂಪ್ ನ ಸದಸ್ಯರ ಸಹಕಾರದಿಂದ ಈ ಸೇವಾಯೋಜನೆ ಮುಂದುವರಿಯಲಿದೆ.
ಅಳದಂಗಡಿ ಮತ್ತು ಸುಲ್ಕೇರಿಮೊಗ್ರು ಬೀಟ್ ಪೊಲೀಸರ ಸೇವಾ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ