ನವದೆಹಲಿ: ಕೊರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹರಡುತ್ತಿದ್ದು, ವಿಶ್ವಸಮುದಾಯ ಪರಸ್ಪರ ಸಹಾಯಕ್ಕೆ ನೆರವಿನ ಹಸ್ತ ಚಾಚುತ್ತಿದೆ. ಈ ನಡುವೆ ಅತ್ಯಂತ ವಿಲಕ್ಷಣ ವರದಿಯೊಂದು ಪ್ರಕಟವಾಗಿದೆ.
ಪಾಕಿಸ್ತಾನದ ಪರಮಾಪ್ತ ಮಿತ್ರ ರಾಷ್ಟ್ರವೆಂದೇ ಗುರುತಿಸಿಕೊಂಡಿರುವ ಚೀನಾ, ಕೊರೋನಾ ವಿರುದ್ಧ ಹೋರಾಡುವುದಕ್ಕೆ ಪಾಕ್ ಗೆ ಅಂಡರ್ ವೇರ್ ನಿಂದ ಎನ್-95 ಮಾಸ್ಕ್ ತಯಾರಿಸಿ ಕಳಿಸಿದೆ.
ತಮ್ಮ ದೇಶಕ್ಕೆ ಚೀನಾ ಅಂಡರ್ ವೇರ್ ನಿಂದ ಎನ್-95 ಮಾಸ್ಕ್ ತಯಾರಿಸಿ ಕಳಿಸಿರುವ ಬಗ್ಗೆ ಪಾಕಿಸ್ತಾನಿ ಮಾಧ್ಯಮಗಳು ವರದಿ ಪ್ರಕಟಿಸಿದೆ. ಕೊರೋನಾ ವಿರುದ್ಧ ಹೋರಾಡುವುದಕ್ಕೆ ಅತ್ಯಧಿಕ ಗುಣಮಟ್ಟದ ವೈದ್ಯಕೀಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದ ಚೀನಾ, ಈಗ ಅಂಡರ್ ವೇರ್ ನಿಂದ ಎನ್-95 ಮಾಸ್ಕ್ ತಯಾರಿಸಿ ಕಳಿಸಿದೆ. ಅಷ್ಟೇ ಅಲ್ಲದೇ ವೈದ್ಯಕೀಯ ನೆರವು ನೀಡುವ ಭರವಸೆಯನ್ನೂ ಹುಸಿಗೊಳಿಸಿದ್ದು ಕೈ ಕೊಟ್ಟಿದೆ.
ಚೀನಾ ಕಳುಹಿಹಿಸಿದ ಮಾಸ್ಕ್ ಗಳನ್ನು ಸರ್ಕಾರ ನೇರವಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿತ್ತು.ಆದರೆ ಬಾಕ್ಸ್ ತೆಗೆದು ನೋಡಿದ ಸಿಬ್ಬಂದಿಗಳು ಅಂಡರ್‍ವೇರ್ ನಿಂದ ತಯಾರಾದ ಮಾಸ್ಕ್ ನೋಡಿ ಶಾಕ್ ಆಗಿದ್ದಾರೆ. ಪಾಕ್ ವಾಹಿನಿ ಸುದ್ದಿ ಪ್ರಕಟಿಸಿರುವುದನ್ನು ಭಾರತದ ಮೇಜರ್ (ನಿವೃತ್ತ) ಗೌರವ್ ಆರ್ಯ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಸರ್ಕಾರ ಚೀನಾ ಬಳಿ ಮೆಡಿಕಲ್ ರಕ್ಷಣಾ ವಸ್ತ್ರ, ಮಾಸ್ಕ್,ಟೆಸ್ಟಿಂಗ್ ಕಿಟ್,ವೆಂಟಿಲೇಟರ್ ನೀಡಲು ಮನವಿ ಮಾಡಿತ್ತು. ಕೊರೋನಾ ಭೀತಿಯಿಂದ ಗಡಿಗಳನ್ನು ಬಂದ್ ಮಾಡಿರುವ ಪಾಕಿಸ್ತಾನಕ್ಕೆ ಚೀನಾ ಗಡಿಯನ್ನು ತೆರೆಯಬೇಕೆಂದು ಆಗ್ರಹಿಸಿತ್ತು.