Monday, November 25, 2024
ಸುದ್ದಿ

ಮಹಾಲಿಂಗೇಶ್ವರ ದೇವಸ್ಥಾನದ ಗೊನೆ ಮುಹೂರ್ತದ ವಿಡಿಯೋ ವೈರಲ್ ವಿಚಾರ : ವಾಸ್ತವ ವಿಚಾರ ತಿರುಚಿ ಖಾಸಗೀ ವಾಹಿನಿಯ ವಿಡಿಯೋ ಎಡಿಟ್ ಮಾಡಿ ಸುಳ್ಳು ಸುದ್ದಿ – ದೇವಳದಿಂದ ಪೊಲೀಸರಿಗೆ ದೂರು – ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.1ರಂದು ಬೆರಳೆಣಿಕೆಯ ಮತ್ತು ಅಗತ್ಯ ವೈಧಿಕ ಸಿಬಂದಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ವಾರ್ಷಿಕ ಜಾತ್ರೆ ಗೊನೆಮುಹೂರ್ತವನ್ನು ಸಾಮಾಜಿಕ ಅಂತರ ಕಾಯ್ದು ಕೊಂಡು ಸರಳ ರೀತಿಯಲ್ಲಿ ನಡೆದಿದ್ದರೂ, ಕಿಡಿಗೇಡಿ, ಜಿಹಾದಿ ಶಕ್ತಿಗಳು, ಸುವರ್ಣ ನ್ಯೂಸ್ ವಾಹಿನಿಯ ಹಳೇ ವಿಡಿಯೋ ಯೊಂದಕ್ಕೆ ಎಡಿಟ್ ಮಾಡಿ ವಾಸ್ತವ ವಿಚಾರ ತಿರುಚಿ ಧಿಕ್ಕರಿಸಿ ತಪ್ಪು ಸಂದೇಶವನ್ನು ಹಬ್ಬಿಸುವ ಕೃತ್ಯವೊಂದು ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇವಳದ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಯ ಬಿಟ್ಟಿರುವ ಇಂತಹ ನಕಲಿ ಸುದ್ದಿಗಳ ಕುರಿತಂತೆ ಶ್ರೀ ದೇವಾಲಯದ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೆ ಖಾಸಗಿ ವಾಹನಿಯವರಿಗೆ ಈ ವಿಚಾರವನ್ನು ಗಮನಕ್ಕೆ ತರಲಾಗಿದೆ. ಖಾಸಗಿ ಸುದ್ದಿ ವಾಹಿನಿಯೂ ನಕಲಿ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ ಪುತ್ತೂರು ಸೀಮೆಯ ಆರಾಧ್ಯ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮತ್ತು ದೇವರ ಭಕ್ತರಿಗೆ ಇದರಿಂದ ತುಂಬಾ ನೋವಾಗಿದೆ. ಪೊಲೀಸರೆ ಸ್ವಯಂ ಪ್ರೇರಿತವಾಗಿ ಈ ಕುರಿತು ಪ್ರಕರಣ ದಾಖಲಿಸಬೇಕೆಂದು ಸಲಹೆ ಕೂಡಾ ಭಕ್ತರಿಂದ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು