Breaking News : ಕರ್ನಾಟಕ-ಕೇರಳ ಗಡಿ ತೆರವಿಗೆ ಸುಪ್ರೀಂ ಸೂಚನೆ – ತುರ್ತು ಚಿಕಿತ್ಸೆಗಾಗಿ ಮಾತ್ರ ಅವಕಾಶ – ಕಹಳೆ ನ್ಯೂಸ್
ನವದೆಹಲಿ, ಎ.07 : ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಕೇರಳ – ಕರ್ನಾಟಕ ಗಡಿಭಾಗವನ್ನು ಕರ್ನಾಟಕ ಸರ್ಕಾರ ಬಂದ್ ಮಾಡಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ಕೇರಳ ರಾಜ್ಯದ ಜೊತೆಗೆ ತುರ್ತು ಚಿಕಿತ್ಸೆಗಾಗಿ ಮಾತ್ರ ಗಡಿ ತೆರೆಯಲು ಸೂಚನೆ ನೀಡಿದೆ.
ಕರ್ನಾಟಕ ಗಡಿ ಭಾಗಗಳನ್ನು ಮುಚ್ಚರಿವುದ್ದರಿಂದ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯದ ಜೊತೆಗೆ ಮಾತಕತೆ ನಡೆಸಿದ ಕೇಂದ್ರ ಸರ್ಕಾರ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ತುರ್ತು ಚಿಕಿತ್ಸೆಗಾಗಿ ಮಾತ್ರ ಗಡಿ ತೆರೆಯಬೇಕು ಎಂದು ಹೇಳಿದೆ.
ಕರ್ನಾಟಕ ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲ್ಲೇ ಇದೀಗ 150 ರ ಗಡಿ ದಾಟಿದೆ . ಈ ಕಾರಣದಿಂದಾಗಿ ಕರ್ನಾಟಕ ಕೇರಳ ಗಡಿ ಭಾಗವನ್ನು ಕರ್ನಾಟಕ ರಾಜ್ಯ ಸರ್ಕಾರ ಮುಚ್ಚಿ ಕೇರಳದಿಂದ ಯಾವುದೇ ವಾಹನಗಳಿಗೆ ರಾಜ್ಯಕ್ಕೆ ಬರಲು ಅವಕಾಶ ನೀಡಿರಲಿಲ್ಲ.
ಈ ಬಗ್ಗೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಗತ್ಯ ವಸ್ತುಗಳ ಸಾಗಾಟಕ್ಕೂ ಗಡಿ ಬಂದ್ ಆಗಿರುವುದರಿಂದಾಗಿ ತಿಳಿಸಿತ್ತು.
ಸೋಮವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಅಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗೆ ದಾಖಲು ಮಾಡಲು ಕರ್ನಾಟಕ ಒಪ್ಪಿಗೆ ನೀಡಿದೆ” ಎಂದು ಹೇಳಿದ್ದಾರೆ.