Sunday, November 24, 2024
ಸುದ್ದಿ

ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್ – ಕಹಳೆ ನ್ಯೂಸ್

ನವದೆಹಲಿ: ಕೊರೊನಾ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಚಾರದ ಬಗ್ಗೆ ಮಾತನಾಡಿರುವ ಕ್ವಾರಂಟೈನ್ ಸೆಂಟರ್‍ನ ಸಿಬ್ಬಂದಿ ಅವರು ಕ್ವಾರಂಟೈನ್ ಕೋಣೆ 212 ಮುಂದೆಯೇ ಮಲವಿಸರ್ಜನೆ ಮಾಡಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಅವರ ಈ ಕೃತ್ಯದಿಂದ ನಮಗೆ ಅಸಹ್ಯವಾಗಿದೆ. ಇಲ್ಲಿರುವ ಕೆಲ ಕೊರೊನಾ ಶಂಕಿತರು ಆರೋಗ್ಯ ಇಲಾಖೆ ಮತ್ತು ಸರ್ಕಾರ ನೀಡುತ್ತಿರುವ ಕೊರೊನಾ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

ಇವರು ನಾವು ಹೇಳಿದ್ದನ್ನು ಕೇಳುತ್ತಿಲ್ಲ. ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಇದರಿಂದ ಇವರ ಜೀವಕ್ಕೂ ಅಪಾಯವಿದೆ. ಅವರ ಜೊತೆಗೆ ಬೇರೆಯವರ ಮತ್ತು ನಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಪೊಲೀಸರು ಈಗ ಇಬ್ಬರ ಮೇಲೆ ಕೇಸ್ ದಾಖಲಿಸಿದ್ದಾರೆ.

ಇಲ್ಲಿಯವರೆಗೆ ಮಾರ್ಚ್‍ನಲ್ಲಿ ನಡೆದ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 400ಕ್ಕೂ ಹೆಚ್ಚು ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಜೊತೆಗೆ 15 ಸಾವನ್ನಪ್ಪಿದ್ದಾರೆ. ಕಳೆದ ಮಾರ್ಚ್ ತಿಂಗಳು ದೆಹಲಿ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದೇಶದ ನಾನಾ ಭಾಗದಿಂದ ಸರಿ ಸುಮಾರು 9,000 ಜನರು ಭಾಗವಹಿಸಿದ್ದರು. ದೆಹಲಿ, ತಮಿಳುನಾಡು ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳಿಂದ ಈ ಧಾರ್ಮಿಕ ಸಭೆಗೆ ಬಂದಿದ್ದರು.

ದೇಶದ 4 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 1,445 ತಬ್ಲಿಘಿ ಕಾರ್ಯಕ್ರಮದಿಂದಲೇ ದಾಖಲಾಗಿದೆ. ತಬ್ಲಿಘಿಗಳು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಸೇರಿದಂತೆ ಒಟ್ಟು 26 ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.