Friday, September 20, 2024
ಸುದ್ದಿ

ಬಸವಣ್ಣನ ಹುಟ್ಟೂರಿಗೆ ಆಗಮಿಸುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ – ಯಾವಾಗ ? ಕಾರ್ಯಕ್ರಮದ ವಿವರ ಇಲ್ಲಿದೆ – ಕಹಳೆ ನ್ಯೂಸ್

ನವದೆಹಲಿ: ಮಾರ್ಚ್ 15ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಜಯಪುರಕ್ಕೆ ಭೇಟಿ ನೀಡಲಿದ್ದು ಆಗ ಬಸವಣ್ಣರ ಹುಟ್ಟೂರು ಇಂಗಳೇಶ್ವರಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗಿದ್ದು ಅವರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ವಿರಕ್ತ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಗಳೇಶ್ವರದಲ್ಲಿ ಮಠದ ವತಿಯಿಂದ ಬಸವೇಶ್ವರ ವಚನ ಶಿಲಾಶಾಸನ ಮಂಟಪ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ಬಸವಣ್ಣರ 1000 ಮತ್ತು ಇತರರ 600 ಸೇರಿ 600 ವಚನಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. 1,70,000 ಅಕ್ಷರಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು ಇದೊಂದು ವಿಶ್ವದಾಖಲೆ. ಗೋರಖಪುರದಲ್ಲಿನ ಗೀತಾ ಮಂದಿರದಲ್ಲಿ ಭಗವದ್ಗಿತೆಯನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು ಅದು 23,000 ಅಕ್ಷರಗಳನ್ನು ಹೊಂದಿದ್ದು ವಿಶ್ವದಾಖಲೆಯಾಗಿತ್ತು.
ಈ ವಚನ ಶಿಲಾಶಾಸನವನ್ನು ಪ್ರಧಾನಿಗಳು ಉದ್ಘಾಟಿಸಬೇಕು ಎಂದು ಕೋರಲಾಗಿದೆ’ ಎಂದು ಸ್ವಾಮೀಜಿ ಹೇಳಿದರು. 1965ರಿಂದ ವಚನಗಳನ್ನು ಕಲ್ಲಿನಲ್ಲಿ ಕೆತ್ತುವ ಕೆಲಸ ಪ್ರಾರಂಭಿಸಲಾಗಿತ್ತು. ಸುಮಾರು 6 ಕೋಟಿ ವೆಚ್ಚದಲ್ಲಿ ಈ ಕೆಲಸ ನಡೆದಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಜಾಹೀರಾತು

ವರದಿ : ಕಹಳೆ ನ್ಯೂಸ್