Saturday, November 23, 2024
ಸುದ್ದಿ

ಬಂಟ್ವಾಳ : ಕಳ್ಳಭಟ್ಟಿ ಅಡ್ಡೆಗೆ ದಾಳಿ – ಅಲ್‌ಸ್ಟರ್‌ ಪಿಂಟೋ, ರೋಶನ್‌ ಫೆರ್ನಾಂಡಿಸ್‌ ಅಂದರ್‌ – ಕಹಳೆ ನ್ಯೂಸ್

ಬಂಟ್ವಾಳ, ಎ.08  : ಬಂಟ್ವಾಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟುನಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ಸರಾಯಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಫಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರನ್ನು ಅಗ್ರಾರ್‌ಕೋಡಿ ನಿವಾಸಿಗಳಾದ ಅಲ್‌ಸ್ಟರ್‌ ಪಿಂಟೋ ಹಾಗೂ ರೋಶನ್‌ ಫೆರ್ನಾಂಡಿಸ್‌ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳ್ಳಭಟ್ಟಿ ತಯಾರಿಕೆಯ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಬಂಟ್ವಾಳ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್‌ ಗಾಗೂ ನಗರ ಪಿಎಸ್‌ಐ ಅವಿನಾಶ್‌ ಅವರ ನೇತೃತ್ವದಲ್ಲಿ ತಂಡ ದಾಳಿ ನಡೆಸಿ, ಇಬ್ಬರು ಆರೋಪಿಗಳ ಸಹಿತ ಸರಾಯಿ ಯರಾರಿಸಲು ಬಳಕೆ ಮಾಡಿರುವ ಸಾಮಾಗ್ರಿಗಳು, ಸ್ಕೂಟರ್‌ ಹಾಗೂ 20 ಲೀಟರ್‌ ಸಾರಾಯಿಯನ್ನು ವಶಕ್ಕೆ ಪಡೆದಿದೆ.

ಕಾರ್ಯಚರಣೆಯಲ್ಲಿ ಬಂಟ್ವಾಳ ಅಪರಾಧ ಪತ್ತೆ ವಿಭಾಗದ ಪಿಎಸ್‌ಐ ಕುಮಾರ್‌ ಕಾಂಬ್ಳೆ, ಸಿಬಂದಿ ಬಸವರಾಜ್‌, ವಿವೇಕ್‌, ಕುಮಾರ್‌ ಪಾಲ್ಗೊಂಡಿದ್ದರು.

ಈ ಕುರಿತಾಗಿ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.