Recent Posts

Monday, January 20, 2025
ರಾಜಕೀಯ

ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಸಹಾಯವಾಣಿಗೆ ಚಾಲನೆ ನೀಡಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ – ಕಹಳೆ ನ್ಯೂಸ್

ಮಂಗಳೂರು, ಎ.09 : ರಾಜ್ಯ ಬಿಜೆಪಿ ಸಹಾಯವಾಣಿಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಿದರು.

ಉದ್ಘಾಟನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾ.23ರಿಂದಲೇ ರಾಜ್ಯದ ಎಲ್ಲಾ ಜಿಲ್ಲೆ, ಮಂಡಲಗಳಲ್ಲಿ ಬಿಜೆಪಿ ವಾರ್ ರೂಂ ಆರಂಭವಾಗಿದೆ. ಇಂದಿನಿಂದ ಬಿಜೆಪಿ ಕರ್ನಾಟಕ ಕೋವಿಡ್ ಹೆಲ್ಪ್ ಲೈನ್ ಆರಂಭವಾಗಲಿದೆ . ರಾಜ್ಯದ ಎಲ್ಲಾ ಜನರು ನೆರವಿಗಾಗಿ 08068324040 ಈ ಸಂಖ್ಯೆ ಮೂಲಕ ಸಂಪರ್ಕ ಮಾಡಬಹುದು. 8722557733 ಈ ನಂಬರ್ ಮೂಲಕ ವಾಟ್ಸಾಪ್ ಸಂಪರ್ಕ ಮಾಡಬಹುದು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರದವರೆಗೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ 20,13,910 ಆಹಾರದ ಪೊಟ್ಟಣವನ್ನು ವಿತರಣೆ ಮಾಡಲಾಗಿದೆ. ಹಾಗೆಯೇ 1,96,150 ಮಾಸ್ಕ್ ಮತ್ತು 5,95,705 ರೇಷನ್ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ. ನಮ್ಮ ಹೆಲ್ಪ್ ಲೈನ್ ಆರಂಭ ತಡವಾಗಿಲ್ಲ. ಆದರೆ ಹೆಲ್ಪ್ ಲೈನ್ ಸಂಖ್ಯೆ ಇಂದಿನಿಂದ ಆರಂಭವಾಗಲಿದೆ. ಆಹಾರ, ತುರ್ತು ಚಿಕಿತ್ಸೆ ಸೇರಿ ಯಾವುದೇ ಅವಶ್ಯಕತೆಗೆ ಕರೆ ಮಾಡಬಹುದು. ಇದರಲ್ಲಿ 12 ಅಗತ್ಯ ವಿಷಯಗಳನ್ನು ಜೋಡಿಸಲಾಗಿದೆ ಎಂದರು.

ದ.ಕ ಜಿಲ್ಲೆಯ 2.16 ಲಕ್ಷ ಜನ್ ಧನ್ ಖಾತೆಗಳಿಗೆ 10.79 ಕೋಟಿ ನೀಡಿದ್ದೇವೆ. ಇಎಮ್‌ಐ ಮುಂದೂಡಿಕೆ ಕುರಿತಾಗಿ ಬ್ಯಾಂಕ್‌ನಿಂದ ನೋಟೀಸ್ ಬಂದರೆ ಯಾವುದೇ ಭಯ ಬೇಡ. ನಮ್ಮಲ್ಲಿ ಸಾಧ್ಯವಾದರೆ ಮಾತ್ರ ಕಟ್ಟಿ. ಇಲ್ಲವಾದ್ದಲ್ಲಿ ಸಮಸ್ಯೆಯಿಲ್ಲ. ಈ ಕುರಿತಾಗಿ ನಾವು ಈಗಾಗಲೇ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದೇವೆ. ವಿದ್ಯುತ್ ಬಿಲ್ ಬಂದರೂ ಅಸಮರ್ಥರಿದ್ದರೆ ಕಟ್ಟುವ ಅಗತ್ಯ ಇಲ್ಲ. ಮೂರು ತಿಂಗಳು ವಿದ್ಯುತ್‌ ಬಿಲ್‌ ಕಟ್ಟದಿದ್ದಲ್ಲಿ ವಿದ್ಯುತ್‌ ಕಡಿತಗೊಳಿಸುವುದಿಲ್ಲ ಎಂದು ಹೇಳಿದರು.