Sunday, January 19, 2025
ಸಿನಿಮಾ

ಖ್ಯಾತ ನಟಿಯ ಅಶ್ಲೀಲ ವಿಡಿಯೋ, ಫೋಟೋ ಲೀಕ್..! ; ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ನಟಿ ದೂರು – ಕಹಳೆ ನ್ಯೂಸ್

ಕಳೆದ ಕೆಲ ತಿಂಗಳಿಂದ ನಾನಾ ಕಾರಣಗಳಿಂದ ಸುದ್ದಿಯಲ್ಲಿರುವ ಮಾಲಿವುಡ್​ನ ಖ್ಯಾತ ಯುವ ನಟಿ ಜೂಹಿ ರಸ್ತುಗಿ ಅವರು ಇದೀಗ ಬೇರೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಹೌದು, ಜೂಹಿ ರಸ್ತುಗಿ ಅವರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಈ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾತನಾಡಿರುವ ಜೂಹಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳಿಗೂ ಹಾಗೂ ಫೋಟೋಗೂ ನನಗೂ ಯಾವುದೇ ಸಂಬಂಧವಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಯಾರೂ ಕಿಡಿಗೇಡಿಗಳು ಎಡಿಟ್ ಮಾಡಿ ಬಿಟ್ಟಿರುವ ಚಿತ್ರಗಳಾಗಿವೆ. ಅಲ್ಲದೆ ನನ್ನ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿ ಇಂತಹ ನೀಚ ಕೃತ್ಯ ಎಸೆಗಿದ್ದಾರೆ ಎಂದು ಜೂಹಿ ತಿಳಿಸಿದ್ದಾರೆ.

ನನ್ನ ಇಮೇಜ್​ನ್ನು ಹಾಳು ಮಾಡಲೆಂದೇ ಕೆಲವರು ಈ ದುಷ್ಕೃತ್ಯ ಎಸಗಿದ್ದು, ಅಂತವರ ವಿರುದ್ಧ ಈಗಾಗಲೇ ಈ ಬಗ್ಗೆ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಎರ್ನಾಕುಲಂ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಜೂಹಿ ತಿಳಿಸಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿಯ ಹೆಸರಿನೊಂದಿಗೆ ಒಂದಷ್ಟು ಫೋಟೋಗಳು ಹಾಗೂ ವಿಡಿಯೋಗಳು ಹರಿದಾಡುತ್ತಿದ್ದು, ಈ ಪ್ರಕರಣವನ್ನು ಸೈಬರ್ ಕ್ರೈಂ ಕೈಗೆತ್ತಿಕೊಂಡಿದ್ದು ಶೀಘ್ರದಲ್ಲೇ ಅಪರಾಧಿಗಳನ್ನು ಪತ್ತೆ ಹಚ್ಚುವುದಾಗಿ ಎರ್ನಾಕುಲಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.