ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮುಂದುವರೆದ ಗುಡ್ ನ್ಯೂಸ್ ; ಗುರುವಾರವೂ ಎಲ್ಲಾ ಪ್ರಕರಣಗಳು ನೆಗೆಟಿವ್ – ಕಹಳೆ ನ್ಯೂಸ್
ಮಂಗಳೂರು, ಏ 09 : ದ.ಕ. ಜಿಲ್ಲೆಯ ಜನತೆಗೆ ಗುರುವಾರವೂ ಸಿಹಿ ಸುದ್ದಿ ಲಭಿಸಿದೆ. ಗುರುವಾರವೂ ಎಲ್ಲಾ ಪ್ರಕರಣಗಳು ನೆಗೆಟಿವ್ ಆಗುವ ಮೂಲಕ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ದ.ಕ. ಜಿಲ್ಲೆಯಲ್ಲಿ ಇಂದು ಲಭ್ಯವಾದ ವರದಿಯ ಪ್ರಕಾರ 8 ಪರೀಕ್ಷಾ ವರದಿಗಳು ಸಿಕ್ಕಿವೆ. ಎಲ್ಲಾ ಎಂಟು ಪ್ರಕರಣಗಳು ನೆಘೆಟಿವ್ ಆಗಿವೆ. ಇನ್ನು ಗುರುವಾರದಂದು ಸುಮಾರು 24 ಪ್ರಕರಣಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ಹಿಂದೆ ಕಳುಹಿಸಿದ ಒಂದು ಪ್ರಕರಣ ಸೇರಿದಂತೆ ಇಂದಿನ ಇಪ್ಪತ್ತನಾಲ್ಕು ಪ್ರಕರಣಗಳ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಗುರುವಾರದಂದು ಒಟ್ಟು 92 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. 3352 ಮಂದಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು 12 ಮಂದಿ ಇಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 2594 ಮಂದಿ ಈಗಾಗಲೇ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಇನ್ನು ಇಲ್ಲಿಯ ತನಕ ಸುಮಾರು 381 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, 356 ಪರೀಕ್ಷಾ ವರದಿಗಳು ಕೈ ಸೇರಿವೆ. ಇವುಗಳಲ್ಲಿ 344 ಪ್ರಕರಣಗಳು ನೆಗೆಟಿವ್ ವರದಿಯನ್ನು ನೀಡಿವೆ. ಉಳಿದಂತೆ 12 ಪ್ರಕರಣಗಳು ಪಾಸಿಟಿವ್ ಆಗಿದೆ. 8 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.