Recent Posts

Sunday, January 19, 2025
ಸುದ್ದಿ

ಕೊರೋನಾ ಭೀತಿ ನಡುವೆಯೂ ತಮಿಳುನಾಡಿನಿಂದ ಬೈಕಿ‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬಕ್ಕೆ ಬಂದ ಗಂಡ – ಹೆಂಡತಿ ; ಸ್ಥಳೀಯರಲ್ಲಿ ಮನೆ ಮಾಡಿದೆ ಆತಂಕ – ಕಹಳೆ ನ್ಯೂಸ್

ಕಡಬ : ಕೊರೋನಾ ಭೀತಿ ನಡುವೆಯೂ ತಮಿಳುನಾಡಿನಿಂದ ಬೈಕಿ‌ನಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಕಡಬಕ್ಕೆ ಆಗಮಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಓಟಕಜೆ ಕಾಲನಿಯ ಮಹಿಳೆಯನ್ನು ತಮಿಳುನಾಡಿನ ಕೊಯಂಬತ್ತೂರಿಗೆ ಮದುವೆ ಮಾಡಿಕೊಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಎಪ್ರಿಲ್ 07 ರಂದು ತಮಿಳುನಾಡಿನ ಕೊಯಂಬತ್ತೂರು ಕಲೆಕ್ಟರ್ ಕಛೇರಿಯಿಂದ ಮೆಡಿಕಲ್ ಎಮರ್ಜೆನ್ಸಿ ಪಾಸ್‌ ಪಡೆದುಕೊಂಡ ಕುಟುಂಬವು ತಮಿಳುನಾಡು ನೋಂದಾಯಿತ ಬೈಕಿನಲ್ಲಿ ನೇರವಾಗಿ ಕಡಬ ತಾಲೂಕಿನ ಐತ್ತೂರು ಗ್ರಾಮದ ಓಟಕಜೆ ಸಿ.ಆರ್.ಸಿ ಕಾಲನಿಗೆ ಆಗಮಿಸಿದೆ. ಸುಮಾರು 40 ಕುಟುಂಬಗಳು ಈ ಕಾಲನಿಯಲ್ಲಿ ವಾಸಿಸುತಿದ್ದು, ಕಾಲನಿಯಲ್ಲಿ ಭಯದ ವಾತಾವರಣ ಶುರುವಾಗಿದೆ. ಈ ಬಗ್ಗೆ ಸ್ಥಳೀಯರು ಐತ್ತೂರು ಗ್ರಾಮ ಪಂಚಾಯತ್ ಹಾಗೂ ಕಡಬ ಪೊಲೀಸ್ ಠಾಣೆಗೆ ಮಾಹಿತಿ‌ ನೀಡಿದ್ದಾರೆ.