Saturday, November 23, 2024
ಸುದ್ದಿ

Shocking News : ವಿಶ್ವಾದ್ಯಂತ ಕೊರೋನಾಗೆ 95,699 ಮಂದಿ ಬಲಿ; 16 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – ಕಹಳೆ ನ್ಯೂಸ್

ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಅನೇಕ ರಾಷ್ಟ್ರಗಳು ಕೊರೋನಾ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿವೆ. ಇಟಲಿ, ಅಮೆರಿಕ, ಸ್ಪೇನ್ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ದಿನೇ ದಿನೇ ಕೊರೋನಾ ಆರ್ಭಟ ಹೆಚ್ಚಾಗುತ್ತಿದೆಯೇ ಹೊರೆತು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.  ಜಗತ್ತಿನಾದ್ಯಂತ 16,00,427 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು 95,699 ಜನರು ಮಾರಣಾಂತಿಕ ಕೊರೋನಾಗೆ ಬಲಿಯಾಗಿದ್ದಾರೆ. 

ಅಮೆರಿಕದಲ್ಲಿ ಕೊರೋನಾ ಸೋಂಕಿನಿಂದ 16,498 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ಸೋಂಕಿತರ ಸಂಖ್ಯೆ 4,64,865ಕ್ಕೆ ಏರಿಕೆಯಾಗಿದೆ. ಸ್ಪೇನ್​​ನಲ್ಲಿ 15,447 ಜನರು ಕೊರೋನಾಗೆ ಬಲಿಯಾಗಿದ್ದರೆ, 1,53,222 ಮಂದಿಗೆ ಕೊರೋನಾ ಸೋಂಕು ಹರಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಟಲಿಯಲ್ಲಿ ಕೊರೋನಾ ಸೋಂಕಿನಿಂದ 18,279 ಮಂದಿ ಮೃತಪಟ್ಟಿದ್ದರೆ, ಪ್ರಕರಣಗಳ ಸಂಖ್ಯೆ 1,43,626ಕ್ಕೆ ಏರಿಕೆಯಾಗಿದೆ. ಜರ್ಮನಿಯಲ್ಲೂ ಸಹ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, 1,18,245 ಜನರಿಗೆ ಸೋಂಕು ತಗುಲಿದೆ. 2607 ಮಂದಿ ಮೃತಪಟ್ಟಿದ್ದಾರೆ. ಫ್ರಾನ್ಸ್​ನಲ್ಲಿ 86,334 ಮಂದಿಗೆ ಸೋಂಕು ತಗುಲಿದ್ದು, 12,210 ಜನರು ಕೊರೋನಾಗೆ ಬಲಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ವಿಶ್ವಾದ್ಯಂತ 3,54,464 ಮಂದಿ ಗುಣಮುಖರಾಗಿದ್ದಾರೆ.  ಇದು ಸಮಾಧಾನಕಾರ ವಿಷಯವಾಗಿದೆ. ಆದರೆ ಕೊರೋನಾ ಪ್ರಭಾವ ತಗ್ಗುತ್ತಿಲ್ಲ. ಎಲ್ಲೆಡೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 6,412ಕ್ಕೆ ಏರಿಕೆಯಾಗಿದೆ. ಈವರೆಗೆ 199 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಒಟ್ಟು 503 ಜನ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 678 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ 33 ಮಂದಿ ಬಲಿಯಾಗಿದ್ದಾರೆ.