Recent Posts

Sunday, January 19, 2025
ಸುದ್ದಿ

ಉಡುಪಿ ಜಿಲ್ಲೆಯ ಗಡಿ ಇಂದಿನಿಂದ ಸಂಪೂರ್ಣ ಬಂದ್‌ ; ಜಿಲ್ಲಾಧಿಕಾರಿ ಜಿ. ಜಗದೀಶ್‌ – ಕಹಳೆ ನ್ಯೂಸ್

ಉಡುಪಿ, ಎ.11 : ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರದಿಂದ ಜಿಲ್ಲೆಯ ಗಡಿಯನ್ನು ಸಂಪೂಣ್ವಾಗಿ ಬಂದ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಲಾಕ್‌ಡೌನ್‌ ಎ.14 ರ ಅವಧಿ ಹತ್ತಿರವಾಗುತ್ತಿರುವ ಕಾರಣದಿಂದಾಗಿ ಹೊರ ಜಿಲ್ಲೆಯಲ್ಲಿರುವ ಉಡುಪಿ ಜಿಲ್ಲೆಯವರನ್ನು ಆಗಮಿಸಲು ಹಾಗೂ ಉಡುಪಿ ಜಿಲ್ಲೆಯಲ್ಲಿರುವ ಬೇರೆ ಜಿಲ್ಲೆಯ ಜನರು ತಮ್ಮ ಊರಿಗೆ ಮರಳಲು ತುದಿಗಾಲಲ್ಲಿ ನಿಂತಿರುವ ಸಂದರ್ಭ ಸದ್ಯ ಲಾಕ್‌ಡೌನ್‌ ನಿಲ್ಲುವುದಿಲ್ಲ. ಯಾರೂ ಬರುವುದು ಬೇಡ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಮೂವರು ಕೊರೊನಾ ಶಂಕಿತರು ಗುಣಮುಖರಾಗಿದ್ದಾರೆ. ಹಾಗೆಯೇ ಇವರ ಸಂಪರ್ಕದಲ್ಲಿದ್ದ ಯಾರಿಗೂ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಹೊರ ಜಿಲ್ಲೆಯವರು ಉಡುಪಿಗೆ ಬರುತ್ತಾರೆ ಎಂದು ತಿಳಿದು ಬಂದಿದೆ. ಯಾರೂ ಕೂಡಾ ಜಿಲ್ಲೆಗೆ ಬರುವಂತಿಲ್ಲ ಹಾಗೆಯೇ ಯಾರೂ ಕೂಡಾ ಇಲ್ಲಿಂದ ಹೊರಕ್ಕೆ ಹೋಗುವಂತಿಲ್ಲ. ಜಿಲ್ಲೆಯ ಎಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಯಾರಿಗೂ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಆದೇಶ ಮಾಡಿದ್ದಾರೆ.

ಜಿಲ್ಲೆಯ ಗಡಿಗಳಾದ ಹೆಜಮಾಡಿ, ಸೋಮೇಶ್ವರ, ಶಿರೂರು, ಹೊಸಂಗಡಿ, ಮಾಳ ಮೊದಲಾದೆಡೆ ಚೆಕ್‌ಪೋಸ್ಟ್‌ ಇದೆ. ಇಲ್ಲಿ ಯಾರಿಗೂ ಪ್ರವೇಶಕ್ಕೆ ಅನುಮತಿ ಇಲ್ಲ. ಆದರೆ ಪತ್ರಿಕೆ, ಹಾಲು, ತರಕಾರಿ, ಆಹಾರ ಸಾಮಾಗ್ರಗಳ ಸಾಗಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.