Sunday, January 19, 2025
ರಾಜಕೀಯಸುದ್ದಿ

ಸಾಮಾಜಿಕ ಅಂತರ ಎಂದರೇನು? ಲಾಕ್’ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್’ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ ಮಸಾಲೆ..! – ಕಹಳೆ ನ್ಯೂಸ್

ಬೆಂಗಳೂರು: ದೇಶದಾದ್ಯಂತ ಕೊರೋನಾ ವೈರಸ್ ಲಾಕ್’ಡೌನ್ ಜಾರಿಯಲ್ಲಿದ್ದರೂ, ಸಾಮಾಜಿಕ ಅಂತರವೆಂದರೇನು ಎಂಬುದೇ ಅರಿಯದಂತೆ ಸುಮಾರು 500 ಮಂದಿಯನ್ನು ಸೇರಿಸಿಕೊಂಡ ಶಾಸಕರೊಬ್ಬರು ಭರ್ಜರಿ ಬರ್ತ್’ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ.

ತುರುವೇಕೆರೆ ಶಾಸಕ ಮಸಾಲೆ ಜಯ.ರಾಮ್ ಅವರು ತಮ್ಮ ಹುಟ್ಟುಹಬ್ಬವನ್ನು ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಇಡಗೂರಿನಲ್ಲಿ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಆಚರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹುಟ್ಟುಹಬ್ಬ ಆಚರಣೆ ವೇಳೆ ಶಾಸಕ ಲಾಕ್’ಡೌನ್ ಉಲ್ಲಂಘಿಸಿದ್ದು, ಇಡಗೂರು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ವ್ಯವಸ್ತೆ ಮಾಡಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ಆದರೂ, ಸಿ.ಎಸ್.ಪುರ ಪೊಲೀಸ್ ಇಲಾಖೆ ಮಾತ್ರ ಈ ವರೆಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ, ಈ ಕುರಿತ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಶಾಸಕರ ವಿರುದ್ಧ ಟೀಕೆಗಳು ವ್ಯಕ್ತವಾಗತೊಡಗಿದೆ.