Recent Posts

Sunday, January 19, 2025
ಸುದ್ದಿ

Breaking News : ಕಾಸರಗೋಡಿನಿಂದ ದೋಣಿ ಮೂಲಕ ಮಂಗಳೂರಿಗೆ ಅಕ್ರಮ ಪ್ರವೇಶ ; ಅಡ್ಡೂರು ಕಾಂಜಿಲಕೋಡಿ ನಿವಾಸಿ ಯಾಕೂಬ್ ಸೇರಿದಂತೆ 7 ಮಂದಿ ಬಂಧನ…! – ಕಹಳೆ ನ್ಯೂಸ್

ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಬಿಗು ತಪಾಸಣೆಯಿರುವ ಕಾರಣ ಅಕ್ರಮವಾಗಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಗಡಿಪ್ರವೇಶಿಸಿದ 7ಮಂದಿಯನ್ನು ಬಜಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳಿಕ ಅವರನ್ನು ತಪಾಸಣೆಗೆ ನಗರದ ಇಎಸ್‌ಐ ಆಸ್ಪತ್ರೆಗೆ ಕ್ವಾರಂಟೈನ್‌ಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತ ಮಂಗಳೂರಿನ ಅಡ್ಡೂರು ಕಾಂಜಿಲಕೋಡಿ ನಿವಾಸಿ ಯಾಕೂಬ್ (48), ಆತನ ಪತ್ನಿ ಜೋಹರಾ (45), ಅಳಿಯ ಹಂಝ (29), ಮಕ್ಕಳಾದ ರುಕ್ಸಾನ್ (24), ರುಮಾನ್ (19) ಸೇರಿದಂತೆ ಅಪ್ರಾಪ್ತ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ಅಕ್ರಮ ಪ್ರವೇಶ ಮಾಡಿದವರು. ಈ ಪ್ರಕರಣದಲ್ಲಿ ಮನೆಗೆ ತಲುಪಿಸಿದ ಕಾರು ಚಾಲಕ ಶಾಕೀರ್ ಕೂಡಾ ಆರೋಪಿಯಾಗಿದ್ದಾನೆ. ಇಬ್ಬರು ಅಪ್ರಾಪ್ತರು ಹೊರತುಪಡಿಸಿ 6 ಮಂದಿ ಮೇಲೆ ಬಜಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಡ್ಡೂರು ನಿವಾಸಿಯಾಗಿರುವ ಯಾಕೂಬ್ ಮತ್ತಿತರರು ಅಕ್ರಮವಾಗಿ ಗಡಿ ಪ್ರವೇಶ ಮಾಡಿರುವ ಬಗ್ಗೆ ಬಜಪೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ. ಕೂಡಲೇ ಪೊಲೀಸರು ಆತನ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ ಮೊದಲಿಗೆ ಯಾಕುಬ್ ತಾನು ದೇರಳಕಟ್ಟೆಯಿಂದ ಬಂದಿರುವುದಾಗಿ ತಿಳಿಸಿದ್ದಾನೆ.

ಬಳಿಕ ಆತನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ‘ಏ.9ರಂದು ಮಧ್ಯಾಹ್ನ 1.30ಕ್ಕೆ ಕೇರಳದ ಹೊಸಂಗಡಿಯಿಂದ ರಿಕ್ಷಾದ ಮೂಲಕ ಕೇರಳದ ಚೆಕ್ ಪೋಸ್ಟ್‌ನವರೆಗೆ ಬಂದು ಬಳಿಕ ಕರ್ನಾಟಕ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆಯಿರುವುದರಿಂದ ತಲಪಾಡಿಗೆ ಹೊಂದಿಕೊಂಡಿರುವ ರೈಲು ಪಟ್ಟಿಯ ಮೂಲಕ ಬಂದು ನದಿಯಲ್ಲಿ ದೋಣಿ ಮೂಲಕ ಕೆ.ಸಿ.ರೋಡ್‌ಗೆ ಬಂದಿರುವೆವು. ಬಳಿಕ ಪಾಂಡೇಶ್ವರ ನಿವಾಸಿ ಶಾಕೀರ್ ಎಂಬಾತ ಕಾರಿನಲ್ಲಿ ಅಡ್ಡೂರಿಗೆ ಬಿಟ್ಟು ಹೋಗಿದ್ದಾನೆ’ ಎಂದು ತಿಳಿಸಿದ್ದಾನೆ.

ಕೇಸು ದಾಖಲು

ಕೊರೊನಾ ಜಾಗೃತಿ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದೆ. ಆದರೂ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ನದಿಮೂಲಕ ಗಡಿ ಪ್ರವೇಶ ಮಾಡಿರುವುದು ಕಾನೂನು ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು 6ಮಂದಿ ಮೇಲೆ ಕೇಸು ದಾಖಲಿಸಿದ್ದಾರೆ.

ಕೇರಳ ಗಡಿ ದಾಟಿ ಮಂಗಳೂರಿಗೆ ಆಗಮಿಸಿದ 7ಮಂದಿ ಹಾಗೂ ಕಾರು ಚಾಲಕನನ್ನು ನಗರದ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗುತ್ತಿದೆ. ಇವರೆಲ್ಲರೂ ಇನ್ನು ಕ್ವಾರಂಟೈನ್ ಅನುಭವಿಸಬೇಕಾಗಿದೆ.