Saturday, November 23, 2024
ಸುದ್ದಿ

Breaking News : ತಬ್ಲಿಘಿ ಜಮಾತ್ ಸದಸ್ಯ ಐಸೋಲೇಟೆಡ್ ನಲ್ಲಿ ಬೆತ್ತಲೆ ಓಡಾಡಿದ್ದು ನಿಜವೇ? ಅಸಲಿ ರಹಸ್ಯ ಬಯಲು.! – ಕಹಳೆ ನ್ಯೂಸ್

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಈ ಸಮಯದಲ್ಲಿ ಬಿರುಕು ಮೂಡಿಸುವಂತಾ ಕೆಲವು ಫೋಟೋ, ವಿಡಿಯೋ ಮತ್ತು ಸುದ್ದಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಳ್ಳೆ ಸುದ್ದಿಗಳಿಗಿಂತ ಜಾಸ್ತಿ ಸುಳ್ಳು ಸುದ್ದಿಗಳೇ ಹೆಚ್ಚು ಹರಿದಾಡುತ್ತಿವೆ. ಅದ್ರಲ್ಲೂ ಹೆಚ್ಚಾಗಿ ಒಂದು ಸಮುದಾಯದ ಜನರು ಕೊರೊನಾ ವೈರಸ್ ಹರಡುವುದಕ್ಕೆ ಮುಂದಾಗಿದ್ದಾರೆ ಎಂದು ಬಿಂಬಿಸುವಂತಾಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಥದ್ದೇ ಒಂದು ವಿಡಿಯೋ ಹಿಂದಿನ ಅಸಲಿ ರಹಸ್ಯ ಇದೀಗ ಹೊರ ಬಿದ್ದಿದೆ.

ಹೌದು…ನವದೆಹಲಿಯ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ಹಲವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

ಈ ಪೈಕಿ ಒಬ್ಬ ಸೋಂಕಿತ ವ್ಯಕ್ತಿ ವೈದ್ಯರಿಗೆ ಚಿಕಿತ್ಸೆಗೆ ಸಹಕಾರ ನೀಡದೇ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ಗಳಲ್ಲಿ ಬೆತ್ತಲೆಯಾಗಿ ಓಡಾಡಿದ್ದು ಅಲ್ಲದೇ ಕಿಟಕಿ ಗ್ಲಾಸ್ ಗಳನ್ನು ಒಡೆದು ಹಾಕಿರುವ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದರು.

ನವದೆಹಲಿಯ ಗಜಿಯಾಬಾದ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಬೆತ್ತಲೆಯಾಗಿ ಐಸೋಲೇಟೆಡ್ ವಾರ್ಡ್ ಗಳಲ್ಲಿ ವ್ಯಕ್ತಿಯೊಬ್ಬ ಓಡಾಡಿದ ವಿಡಿಯೋವನ್ನು HindustanKi Awazlive ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು.

ಅಪ್ ಲೋಡ್ ಆದ ಅದೇ ವಿಡಿಯೋವನ್ನು ಕ್ಷಣಾರ್ಧದಲ್ಲಿ 1,400 ಜನರು ಶೇರ್ ಮಾಡಿದ್ದರು.

ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಇತ್ತೀಚಿನದ್ದು ಅಲ್ಲವೇ ಅಲ್ಲ.

ಕಳೆದ 2019ರ ಆಗಸ್ಟ್.23ರಂದು ಪಾಕಿಸ್ತಾನ ಕರಾಚಿಯಲ್ಲಿರುವ ಗುಲ್ಶಾನ್ ಇ ಹದೀದ್ ಪ್ರದೇಶದಲ್ಲಿ ಬೆತ್ತಲೆಯಾಗಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದ್ದು ಎಂಬ ಸತ್ಯ ಇದೀಗ ತಿಳಿದು ಬಂದಿದೆ.

ಇನ್ನು ಈ ವಿಡಿಯೋದಲ್ಲಿ ವ್ಯಕ್ತಿಯು ಒಡೆದು ಹಾಕಿದ ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಪಾಕಿಸ್ತಾನ ಗುಲ್ಶಾನ್ ಇ ಹದೀದ್ ಪ್ರದೇಶದಲ್ಲಿ ಇರುವ ಜಾಮಿಯಾ ಮಸೀದ್ ಖಾಲಿದ್ ಬಿನ್ ವಾಲೀದ್ ಹೋಲಿಕೆ ಕಂಡು ಬಂದಿದೆ.

ಗೂಗಲ್ ನಲ್ಲಿ ಪತ್ತೆಯಾದ ಮಸೀದಿಯ ಅಂದಿನ ಮತ್ತು ಇಂದಿನ ಚಿತ್ರಗಳಲ್ಲಿನ ವ್ಯತ್ಯಾಸ ಕಂಡು ಬರುತ್ತದೆ.

  1. ಕಟ್ಟಡದ ಎರಡನೇ ಫ್ಲೋರ್ ನಲ್ಲಿ ಗಾಜಿನ ಕಿಟಕಿ
  2. ಕಟ್ಟಡದ ಒಂದನೇ ಫ್ಲೋರ್ ನಲ್ಲಿರುವ ಕಿಟಕಿಯು ಕಬ್ಬಿಣದ ಸಲಾಕೆಗಳಿಂದ ಕೂಡಿದೆ

3. ಕಟ್ಟಡದ ಎದುರಿಗೆ ನೀತಿ ಬಣ್ಣದ ಹೆಸರನ್ನು ಬರೆಯಲಾಗಿದೆ

ಪಾಕಿಸ್ತಾನದಲ್ಲಿ ನಡೆದ ಘಟನೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ಶಫೀಕ್ ಅಬ್ರೋ ಎಂಬ ವ್ಯಕ್ತಿಯು ಬೆತ್ತಲೆಯಾಗಿ ಓಡಾಡಿದ್ದನು.

ಈತ ಪಾಕ್ ಕಮಾಂಡೋ ಒಬ್ಬರ ಪುತ್ರನೆಂದು ತಿಳಿದು ಬಂದಿದೆ.

ಇದೇ ವಿಡಿಯೋವನ್ನು ಬಳಸಿಕೊಂಡು ಕೊರೊನಾ ವೈರಸ್ ಧಾಳಿಯ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡು ಸುಳ್ಳು ಸುದ್ದಿ ಹರಿ ಬಿಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.