Recent Posts

Saturday, September 21, 2024
ಸುದ್ದಿ

ಕೊರೊನಾ ಜಾಗೃತಿ ಮೂಡಿಸಿದ ಮಾಧ್ಯಮದವರಿಗೆ ವಿಶೇಷ ಆರ್ಥಿಕ ನಿಧಿ ಒದಗಿಸಿ ; ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶ್ರೀನಿವಾಸ್‌ ನಾಯಕ್‌ ಮನವಿ – ಕಹಳೆ ನ್ಯೂಸ್

ಮಂಗಳೂರು, ಎ.12 : ಕೊರೊನಾ ಸಂದರ್ಭದಲ್ಲಿ ಜಾಗೃತಿ ಮೂಡಿಸಿದ ಮಾಧ್ಯಮದವರಿಗೆ ವಿಶೇಷ ಆರ್ಥಿಕ ನಿಧಿ ಒದಗಿಸಲು ಒತ್ತಾಯಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶ್ರೀನಿವಾಸ್‌ ನಾಯಕ್‌ ಒತ್ತಾಯಿಸಿದ್ದು ಸಂಘದಿಂದ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಮಾಹಾಮಾರಿಯ ವಿರುದ್ದ ಹೋರಾಡುತ್ತಿರುವ ವೈದ್ಯರಿಗೆ, ಪ್ಯಾರಮೆಡಿಕಲ್ ಸಿಬ್ಬಂದಿ ಮತ್ತು ಪೊಲೀಸರಿಗೆ ಆರೋಗ್ಯ ಪರಿಹಾರ ನಿಧಿಯನ್ನು ತಮ್ಮ ಸರ್ಕಾರ ಘೋಷಿಸಿರುವುದು ಕೂಡ ಪ್ರಶಂಸನೀಯ. ಆದರೆ ನಾಡಿನಲ್ಲಿ ಈ ಮಟ್ಟದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಾದರೆ ಅದರಲ್ಲಿ ಮಾಧ್ಯಮದ ಪಾತ್ರ ಹಿರಿದು ಎನ್ನುವುದನ್ನು ಪ್ರತಿಯೊಬ್ಬರು ಒಪ್ಪುವಂತಹುದು. ಮಾರ್ಚ್ ತಿಂಗಳ ಆರಂಭದಿಂದಲೇ ಈ ಬಗ್ಗೆ ಮಾಧ್ಯಮಗಳು ಜಾಗೃತಿಯನ್ನು ಮೂಡಿಸುತ್ತ ಬಂದಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಮಾಧ್ಯಮ ಅದಕ್ಕೆ ಸಹಮತ ಮೂಡಿಸಿ ಜನರಲ್ಲಿ ಅದರ ಮಹತ್ವ ಮತ್ತು ಅನಿವಾರ್ಯತೆಯನ್ನು ಹೇಳುತ್ತಲೇ ಬಂದಿದೆ. ಇದರಲ್ಲಿ ಜನರಲ್ಲಿ ಜಾಗೃತಿ ಹೆಚ್ಚಿನ ಸಾಧ್ಯವಾಗಿದೆ.

ಜಾಹೀರಾತು

ಇದು ಮಾತ್ರವಲ್ಲದೆ ಮಾಧ್ಯಮ ಮಿತ್ರರು ಲಾಕ್ ಡೌನ್ ಇದ್ದರೂ ತಮ್ಮ ಪ್ರಾಣದ ಹಂಗು ತೆರೆದು ಕೊರೊನಾ ಜಾಗೃತಿಗಾಗಿ ಶ್ರಮಿಸಿದ್ದಾರೆ. ಕೊರೊನಾ ಹರಡಲು ಕಾರಣವಾದ ಎಲ್ಲ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಅನೇಕ ಪತ್ರಕರ್ತರು ಈಗಲೂ ಸಂಕಷ್ಟ ಜೀವನ ಅನುಭವಿಸುತ್ತಿದ್ದಾರೆ. ತಮ್ಮ ಸಂಕಷ್ಟ ಜೀವನದ ಮಧ್ಯೆಯೂ ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ ತಮ್ಮ ಜೀವ ಒತ್ತೆಯಿಟ್ಟು ಈ ಕೊರೊನ ಮಹಾಮಾರಿಯ ವಿರುದ್ದ ಹೋರಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಆದುದರಿಂದ ತಾವು ದಯವಿಟ್ಟು ಪತ್ರಕರ್ತರಿಗೂ ಈ ಆರೋಗ್ಯ ಪರಿಹಾರ ನಿಧಿಯನ್ನು ವಿಸ್ತರಿಸಬೇಕೆಂದು ಸವಿನಯ ವಿನಂತಿ. ಇದರಿಂದ ಪತ್ರಕರ್ತರಲ್ಲಿ ಮತ್ತಷ್ಟು ಮನೋಬಲ ಮತ್ತು ಆತ್ಮಸ್ಥೈರ್ಯ ಮೂಡಲು ಸಾಧ್ಯವಾಗಲಿದೆ ಎಂಬುವುದು ನಮ್ಮ ಅಭಿಪ್ರಾಯ. ಈ ಬೇಡಿಕೆಯನ್ನು ಮನ್ನಿಸಿ ಪರಿಹಾರ ನಿಧಿ ಘೋಷಣೆ ಮಾಡುತ್ತೀರೆಂದು ವಿಶ್ವಾಸ ನಮಗಿದೆ ಎಂದು ಮನವಿ ಮಾಡಿದ್ದಾರೆ.