Recent Posts

Saturday, September 21, 2024
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ; ಒಂದು ವಾರದಲ್ಲಿ ಎಲ್ಲಾ ವರದಿಗಳು ನೆಗೆಟಿವ್‌ – ಕಹಳೆ ನ್ಯೂಸ್

ಮಂಗಳೂರು, ಎ.11  : ಈ ವಾರವಿಡಿ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿಲ್ಲ. ಎಪ್ರಿಲ್ 5 ರಿಂದ 11ರವರೆಗೆ‌ ದ.ಕ. ಜಿಲ್ಲೆಯಲ್ಲಿಎಲ್ಲಾ ವರದಿಗಳು ನೆಗೆಟಿವ್ ಆಗಿವೆ. ಇದು ಜಿಲ್ಲೆಯ ಮಟ್ಟಿಗೆ ಆಶಾದಾಯಕ ಸಂಗತಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ. ಜಿಲ್ಲೆಯಲ್ಲಿ ಇಂದು ಲಭ್ಯವಾದ ವರದಿಯ ಪ್ರಕಾರ ೪೬ ಪರೀಕ್ಷಾ ವರದಿಗಳು ಸಿಕ್ಕಿವೆ. ಎಲ್ಲಾ ೪೬ ಪ್ರಕರಣಗಳು ನೆಗೆಟಿವ್ ಆಗಿವೆ. ಇನ್ನು ಶನಿವಾರದಂದು ಸುಮಾರು ೩೪ ಪ್ರಕರಣಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.

ಜಾಹೀರಾತು

ಶನಿವಾರದಂದು ಒಟ್ಟು ೫೨ ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. ೨೫೯೮ ಮಂದಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು ೨೩ ಮಂದಿ ಇಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ೩೩೪೭ ಮಂದಿ ಈಗಾಗಲೇ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಇನ್ನು ಇಲ್ಲಿಯ ತನಕ ಸುಮಾರು ೪೩೬ ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ೪೦೨ ಪರೀಕ್ಷಾ ವರದಿಗಳು ಬಂದಿವೆ. ಇವುಗಳಲ್ಲಿ ೩೯೦ ಪ್ರಕರಣಗಳು ನೆಗೆಟಿವ್ ವರದಿಯನ್ನು ನೀಡಿದ್ದು, 12 ಪ್ರಕರಣಗಳು ಪಾಸಿಟಿವ್ ಆಗಿದೆ. ೮ ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, ೬ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.