Recent Posts

Saturday, September 21, 2024
ಸುದ್ದಿ

ಕೊರೋನಾ:ಮಾತೃತ್ವ ರಜೆ ತೆಗೆದುಕೊಳ್ಳದೇ 1 ತಿಂಗಳ ಹಸುಗೂಸನ್ನು ಕೈಲಿ ಹಿಡಿದು ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ! – ಕಹಳೆ ನ್ಯೂಸ್

ಅಮರಾವತಿ: ಕೊರೋನಾದಿಂದ ವಿಧಿಸಲಾಗಿರುವ ಲಾಕ್ ಡೌನ್ ಜನತೆಗೆ ಅದೆಷ್ಟೋ ದಕ್ಷ ಅಧಿಕಾರಿಗಳನ್ನು ವೈದ್ಯರನ್ನು ಪರಿಚಯಿಸುತ್ತಿದೆ.

ಕೊರೋನಾ ಟೆಸ್ಟ್ ಕಿಟ್ ನ್ನು ತಯಾರಿಸುವ ಯೋಜನೆ ಪೂರ್ಣಗೊಳಿಸಿ ಮಗುವಿಗೆ ಜನ್ಮ ನೀಡಿದ್ದ ತುಂಬು ಗರ್ಭಿಣಿ ವೈದ್ಯೆ ಬಗ್ಗೆ ನೀವೆಲ್ಲ ಓದಿರುತ್ತೀರಿ. ಈಗ ಸಮಾಜದೆಡೆಗೆ ಅಂಥಹದ್ದೇ ಕಳಕಳಿ, ಬದ್ಧತೆ ಹಿಂದಿರುವ ಐಎಎಸ್ ಅಧಿಕಾರಿಯೊಬ್ಬರು ಮಾತೃತ್ವ ರಜೆಯನ್ನು ತೆಗೆದುಕೊಳ್ಳುವುದಕ್ಕೂ ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಂಧ್ರಪ್ರದೇಶದ ಗ್ರೇಟರ್ ವಿಶಾಖ ಮುನ್ಸಿಪಲ್ ಕಮಿಷನರ್ ಆಗಿರುವ ಐಎಎಸ್ ಅಧಿಕಾರಿ ಗುಮ್ಮಳ್ಲ ಸೃಜನ 1 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಆರು ತಿಂಗಳ ಕಾಲ ಮಾತೃತ್ವ ರಜೆ ಪಡೆಯುವ ಎಲ್ಲಾ ಅವಕಾಶವಿದ್ದರೂ ದೇಶದಲ್ಲಿ ಕೊರೋನಾ ಹಾಗೂ ಅದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ಪರಿಸ್ಥಿತಿಯ ಕಾರಣದಿಂದ ಆಕೆ ಕೆಲಸಕ್ಕೆ ಹಾಜರಾಗಿದ್ದಾರೆ.

ಜಾಹೀರಾತು

ವಿಶಾಖ ಮುನ್ಸಿಪಲ್ ಕಮಿಷನರ್ ಹುದ್ದೆಯಲ್ಲಿದ್ದುಕೊಂಡು ದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ಇರುವಾಗ ರಜೆ ತೆಗೆದುಕೊಂಡು ಮನೆಯಲ್ಲಿರುವುದಕ್ಕೆ ಆಕೆಯ ಮನಸ್ಸು ಒಪ್ಪಲಿಲ್ಲ. ಇದು ಕಾರಣ  ಒಂದು ತಿಂಗಳ ಹಸುಗೂಸನ್ನು ಕೈಲಿ ಹಿಡಿದು ಮತ್ತೊಂದೆಡೆ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ಮಾತೃತ್ವ ರಜೆಯನ್ನೂ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಿರುವ ಐಎಎಸ್ ಅಧಿಕಾರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರತೊಡಗಿದೆ.