ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಆಗಾಗ್ಗೆ ಸಖತ್ ಸದ್ದು ಮಾಡುತ್ತಿರುತ್ತದೆ. ಇಂತಹ ಶೋಷಣೆಗೆ ಒಳಗಾದ ಕೆಲ ನಟಿಯರು ತೆರೆ ಮರೆಯ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ. ಹೀಗೆ ಮನಬಿಚ್ಚಿ ಮಾತನಾಡಿದವರ ಪಟ್ಟಿಗೆ ಹೊಸ ಸೇರ್ಪಡೆ ಮಾನ್ವಿ ಗಾಗ್ರೂ.
ಇದೀಗ ಮತ್ತೊಮ್ಮೆ ಚೆಲ್ಲು ಚೆಲ್ಲಾದ ಪಾತ್ರದೊಂದಿಗೆ ತೆರೆ ಮೇಲೆ ಬರಲು ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ‘ಫೋರ್ ಮೋರ್ ಶಾಟ್ಸ್ ಪ್ಲೀಸ್!’ ತಂಡ ಇದರ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇದೇ ವೇಳೆ ಉದ್ಯಮದಲ್ಲಿನ ಕಹಿ ಅನುಭವವನ್ನು ಮಾನ್ವಿ ಹಂಚಿಕೊಂಡಿದ್ದಾರೆ.
ಒಂದು ವರ್ಷಗಳ ಹಿಂದೆ ನಾನು ವೆಬ್ ಸಿರೀಸ್ ಒಂದರಲ್ಲಿ ಅಭಿನಯಿಸಬೇಕಿತ್ತು. ಆಗ ನಾನು ಬಣ್ಣದ ಲೋಕಕ್ಕೆ ಹೊಸಬಳು. ನಿರ್ಮಾಪಕರೊಬ್ಬರು ಕರೆ ಮಾಡಿ ನಟಿಸುವಂತೆ ಕೇಳಿಕೊಂಡಿದ್ದರು.
ನಾನು ಕೂಡ ಸ್ಕ್ರಿಪ್ಟ್ ಹೇಳಿ ನೋಡೋಣ ಎಂದಿದ್ದೆ. ಎಲ್ಲವೂ ಓಕೆ ಆಗುತ್ತಿದ್ದಂತೆ ಅವರು ನನ್ನ ಸಂಭಾವನೆ ಬಗ್ಗೆ ಮಾತನಾಡಿದ್ದರು. ಆದರೆ ಅದು ಕಡಿಮೆಯಾಗಿತ್ತು. ಹೀಗಾಗಿ ಶುಲ್ಕವನ್ನು ಹೆಚ್ಚಿಸುವಂತೆ ಕೇಳಿಕೊಂಡೆ.
ಇದಾಗಿ ಸ್ವಲ್ಪ ಸಮಯದ ಬಳಿಕ ಮತ್ತೊಂದು ಕರೆ ಬಂತು. ಓಕೆ ನೀವು ನಟಿಸುವುದಾದರೆ ಸಂಭಾವನೆಯನ್ನು ಹೆಚ್ಚಿಸುವುದಾಗಿ ತಿಳಿಸಿದರು. ಅದು ಕೂಡ 3 ಪಟ್ಟು ಜಾಸ್ತಿ ಮಾಡುತ್ತೇವೆ ಅಂದರು. ಆದರೆ ಒಂದು ಕಂಡೀಷನ್.
ನಾನು ಏನು ಕಂಡೀಷನ್ ಎಂದು ಕೇಳಿದೆ. ಅತ್ತ ಕಡೆಯಿಂದ ನಿರ್ಮಾಪಕರು ಮೂರು ಪಟ್ಟು ಸಂಭಾವನೆ ನೀಡುತ್ತೇವೆ. ನೀವು ನನ್ನೊಂದಿಗೆ ರಾಜಿ ಮಾಡಿಕೊಳ್ಳಬೇಕು ಎಂದರು. ನಾನು ಅರ್ಥವಾಗಿಲ್ಲ ಅಂದಾಗ, ನೀವು ನನ್ನೊಂದಿಗೆ ಮಂಚ ಹಂಚಿಕೊಳ್ಳಬೇಕು ಎಂದು ಓಪನ್ ಆಗಿ ಕೇಳಿ ಬಿಟ್ಟರು.
ನನಗೆ ಅದೆಲ್ಲಿತ್ತೋ ಕೋಪ…ಆತನನ್ನು ನಾನು ಹಿಗ್ಗಾಮುಗ್ಗ ಬೈದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದೆ. ಇದು ಕೇಳುತ್ತಿದ್ದಂತೆ ಆತ ಕರೆ ಕಟ್ ಮಾಡಿದ್ದ.ಮಾನ್ವಿ ಗಾಗ್ರೂ ಹೇಳಿದರು.
ಸದ್ಯ ಮಾನ್ವಿ ಅಭಿನಯದ ‘ಫೋರ್ ಮೋರ್ ಶಾಟ್ಸ್ ಪ್ಲೀಸ್!’ ವೆಬ್ ಸಿರೀಸ್ ಬಿಡುಗಡೆಗೆ ರೆಡಿಯಾಗಿದ್ದು, ಇದರೊಂದಿಗೆ ಪ್ರತೀಕ್ ಬಬ್ಬರ್ ಮತ್ತು ಮಿಲಿಂದ್ ಸೋಮನ್ ಅಭಿನಯಿಸುತ್ತಿರುವ ಮತ್ತೊಂದು ವೆಸ್ ಸಿರೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.