Recent Posts

Sunday, January 19, 2025
ರಾಜಕೀಯ

ಕೊರೊನ ಸಂಬಂಧ ತಬ್ಲೀಘಿಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ; ಬಿಜೆಪಿ ಕಾರ್ಯಕರ್ತನ ಮೇಲೆ ಕೇಸ್ ದಾಖಲಿಸಿರುವುದು ಪೊಲೀಸರ ಅತಿರೇಕದ ವರ್ತನೆ ಎಂದ ಸಚಿವ ಸಿ.ಟಿ.ರವಿ – ಕಹಳೆ ನ್ಯೂಸ್

ಬೆಂಗಳೂರು: ಕೊರೊನ ಸಂಬಂಧ ತಬ್ಲಿಘಿಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದ ಬಿಜೆಪಿ ಕಾರ್ಯಕರ್ತನ ಮೇಲೆ ಕೇಸ್ ದಾಖಲಿಸಿರುವುದು ಪೊಲೀಸರ ಅತಿರೇಕದ ವರ್ತನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗೃಹ ಸಚಿವ ಹಾಗೂ ಸಹೋದ್ಯೋಗಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದೇನೆ ಎಂದು ಅವರು ಟ್ವೀಟ್‌‌ನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಬ್ಲಿಘಿ ಜಮಾತ್ ಬಗ್ಗೆ ವರದಿ ಪೋಸ್ಟ್ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿರುವ ಸಚಿವ ಸಿ.ಟಿ.ರವಿ ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿರುವುದು ಅತಿರೇಕದ ವರ್ತನೆ ಎಂದಿದ್ದಾರೆ.