Recent Posts

Monday, January 20, 2025
ಸುದ್ದಿ

‘ಕೊರೊನಾಗಿಂತಲೂ ಭಯಾನಕ ಪೊಲೀಸ್ ವೈರಸ್’ ; ಮಂಗಳೂರು ಕಮಿಷನರ್ ಡಾ.ಹರ್ಷಾ ಕುರಿತು ಅವಹೇಳನಾಕಾರಿ ಪೋಸ್ಟ್ – FIR ದಾಖಲು – ಕಹಳೆ ನ್ಯೂಸ್

ಮಂಗಳೂರು: ಜಗತ್ತು ಕೊರೊನಾ ಎಂಬ ಮಹಾಮಾರಿಗೆ ನಲುಗಿ ಹೋಗಿದೆ. ವೈದ್ಯರು, ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ರಾತ್ರಿ ಹಗಲೆನ್ನದೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಮಂಗಳೂರಿನಲ್ಲಿ ಕೂಡ ಕಟ್ಟು ನಿಟ್ಟಾಗಿ ನಿಯಮ ಪಾಲಿಸುವಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

ಆದರೆ ಇಂತಹ ಕೊರೊನಾ ವಾರಿಯರ್ಸ್ ಪೊಲೀಸರ ಬಗ್ಗೆ ಕಿಡಿಗೇಡಿಯೊಬ್ಬ ಕೀಳು ಮಟ್ಟದ ಪೋಸ್ಟ್ ಮಾಡಲಾಗಿದೆ. ಆರೋಪಿಯ ವಿರುದ್ಧ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಕಲ್ತೋ ಬಿಸಯಾ ಎನ್ನುವ ಫೇಸ್‍ಬುಕ್ ಖಾತೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷಾ ಅವರ ಫೋಟೋ ಬಳಸಿ, ”ಕೊರೊನಾಗಿಂದತಲೂ ಭಯಾನಕ ವೈರಸ್ ಮಂಗಳೂರು ಪೊಲೀಸರು. ಭಾರೀ ಸುದ್ದಿ ಮಾಡುತ್ತಿರುವ ಪೋಲೀ__ ವೈರಸ್” ಎಂದು ಪೋಸ್ಟ್ ಮಾಡಲಾಗಿದೆ.

ಈ ಸಂಬಂಧ ವಿರುದ್ಧ ಮಂಗಳೂರಿನ ಪ್ರದೀಪ್ ಎಂಬವರು ಕಂಕನಾಡಿ ನಗರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.