Recent Posts

Monday, January 20, 2025
ರಾಜಕೀಯ

ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್​ ; ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ಪೊಲೀಸರಿಗೆ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು(ಏ.12): ಮಾರಕ ಕೊರೋನಾ ವೈರಸ್​​​ ತಡೆಗೆ ಮುಂಜಾಗೃತ ಕ್ರಮವಾಗಿ ಇಡೀ ದೇಶದಂತೆಯೇ ಬೆಂಗಳೂರು ಕೂಡ ಲಾಕ್​​ಡೌನ್​​​ ಮಾಡಲಾಗಿದೆ.

ಇಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪನವರು ನಗರದಾದ್ಯಂತ ಸಂಚರಿಸಿ ಲಾಕ್​​ಡೌನ್​​​ ಅನುಷ್ಠಾನ ಪರಿಶೀಲಿಸಿದರು. ಹಲವು ಏರಿಯಾಗಳಿಗೆ ದಿಢೀರ್​​​ ಭೇಟಿ ನೀಡಿದ ಸಿಎಂ ಲಾಕ್​​ಡೌನ್​​ನಿಂದ ಸದ್ಯದ ಪರಿಸ್ಥಿತಿ ಹೇಗಿದೆ? ಎಂಬುದನ್ನು ಅವಲೋಕಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ತಮ್ಮ ಕಾವೇರಿ ನಿವಾಸದಿಂದ ಸಿಟಿ ರೌಂಡ್ಸ್​ ಆರಂಭಿಸಿದ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಗೊರಗುಂಟೆ ಪಾಳ್ಯ, ಸುಮನಹಳ್ಳಿ ಸಿಗ್ನಲ್, ಜಯದೇವ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್, ಯಶವಂತಪುರ ಪ್ರದೇಶಗಳಿಗೆ ಭೇಟಿ ನೀಡಿದರು. ಸಿಎಂ ಅನಿರೀಕ್ಷಿತವಾಗಿ ನೀಡಿದ ಭೇಟಿಯೂ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಯಡಿಯೂರಪ್ಪ ಲಾಕ್​​ಡೌನ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ರೀತಿಯಂತೂ ಸಾರ್ವಜನಿಕರ ಗಮನ ಸೆಳೆಯಿತು.


ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರೇ ಕಾರಿನಿಂದ ಕೆಳಗಿಳಿದು ಖುದ್ದು ಲಾಕ್​​ಡೌನ್​​ ಪರಿಸ್ಥಿತಿ ಅವಲೋಕಿಸಿದರು. ಯಶವಂತಪುರ ಫ್ಲೈ ಓವರ್​​ ಬಳಿ ಪೊಲೀಸರೊಂದಿಗೆ ಕೆಲಕಾಲ ಯಡಿಯೂರಪ್ಪ ಮಾತುಕತೆ ನಡೆಸಿದರು. ನಂತರ ಅನವಶ್ಯಕ ಓಡಾಟ ನಡೆಸುತ್ತಿದ್ದ ಜನರಿಗೆ  ಮನೆಯಿಂದ ಹೊರಗೆ ಬಾರದಂತೆ ಮನವಿ ಮಾಡಿದರು.

ಇನ್ನು, ಪೊಲೀಸರಿಗೆ ಯಾವುದೇ ಮಾಹಿತಿ ನೀಡದೇ ದಿಢೀರ್​​ ಕೆಲವು ಏರಿಯಾಗಳಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಮಾಹಿತಿ ಸಂಗ್ರಹ ಮಾಡಿದರು. ಪೊಲೀಸರಿಗೆ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೊಳಿಸುವಂತೆ ಸೂಚಿಸಿದರು. ಸುಖಾಸುಮ್ಮನೆ ಓಡಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವಂತೆ ಸೂಚನೆ ನೀಡಿದರು.

ಇನ್ನೊಂದೆಡೆ ನಮ್ಮ ವ್ಯಾಪಾರ ಕಡಿಮೆಯಾಗಿದೆ. ಪೊಲೀಸರು ಪಾಸ್ ಕೊಡುತ್ತಿಲ್ಲ ಎಂದು ಹಲವರು ದೂರು ನೀಡಿದರು. ಪೊಲೀಸರು ಅಂಗಡಿ ತೆಗೆಯಲು ಅವಕಾಶ ಮಾಡಿಕೊಡುತ್ತಿಲ್ಲ ಎಂಬ ವ್ಯಾಪಾರಿಗಳ ಅಹವಾಲು ಆಲಿಸಿದ ಯಡಿಯೂರಪ್ಪ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿದರು.