Wednesday, January 22, 2025
ಸುದ್ದಿ

” ಅಣ್ಣ ಮಾಲ್ ತಿಕ್ಕುಂಡಿಗೆ..!? ” ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಮದ್ಯ ಮಾರಾಟಕ್ಕೆ ಏ.15 ರಿಂದ ಅನುಮತಿ ಸಾಧ್ಯತೆ – ಕಹಳೆ ನ್ಯೂಸ್

ಬೆಂಗಳೂರು, ಎ.13 : ಮದ್ಯ ಮಾರಾಟದ ವಿಚಾರವಾರದ ಬಗ್ಗೆ ಎ.14ರ ಬಳಿಕ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಿಎಸ್‌ವೈ ಅವರು ಪರೋಕ್ಷವಾಗಿ ಎ.15ರಿಂದ ಮದ್ಯ ಮಾರಾಟಕ್ಕೆ ಅನಯಮತಿ ನೀಡುವ ವಿಚಾರವಾಗಿ ಸುಳಿವು ನೀಡಿದ್ದಾರೆ. ಹಾಗಾಗಿ, ಬುಧವಾರದಿಂದಲೇ ಮದ್ಯ ಮಾರಾಟಕ್ಕೆ ಅನುಮತಿ ಸಿಗಬಹುದು.

ರಾಜ್ಯದಲ್ಲಿ ಈಗಾಗಲೇ ಗುರುತಿಸಲ್ಪಟ್ಟ ಕೊರೊನಾ ವೈರಸ್‌ ರೆಡ್‌ ಹಾಗೂ ಆರೆಂಜ್‌ ಜಿಲ್ಲೆಗಳನ್ನು ಬಿಟ್ಟು ಎಂಎಸ್‌ಎಲ್‌ಗಳ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾರ್‌ ತೆರೆಯಲು ಅವಕಾಶವಿಲ್ಲ, ಬದಲಾಗಿ ಸರ್ಕಾರದ ಎಮ್‌ಎಸ್‌ಐಎಲ್‌ ಮೂಲಕ ಮದ್ಯ ಮಾರಾಟ ಮಾಡಲು ಅವಕಾಶ ದೊರಕುವ ಲಕ್ಷಣಗಳಿವೆ. ಒಂದು ಕಡೆ ಆತ್ಮಹತ್ಯೆ, ಬಾರ್‌ ದರೋಡೆ ನಡೆಯುತ್ತಿದ್ದು, ಕೊರೊನಾ ವೈರಸ್‌ನ ನಡುವೆ ಮದ್ಯ ಪ್ರಿಯರ ಹಾವಳಿಯಿಂದಾಗಿ ಸರ್ಕಾರಕ್ಕೆ ದೊಡ್ಡ ತಲೆನೋವು ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು