Wednesday, January 22, 2025
ಸುದ್ದಿ

ಕಡಬದ ಕೋಡಿಂಬಾಳದಲ್ಲಿ ಆನ್ ಲೈನ್ ಮೂಲಕ ಹಣ ಲಪಾಟಯಿಸಿದ ಖದೀಮರು ; ಓಟಿಪಿ ಸಂಖ್ಯೆ ನೀಡಿ ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ – ಕಹಳೆ ನ್ಯೂಸ್

ಕಡಬ : ಒಟಿಪಿ ಸಂಖ್ಯೆಯ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಿರುವ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಇದೀಗ ಕಡಬದ ವ್ಯಕ್ತಿಯೋರ್ವರು ಅಪರಿಚಿತರಿಗೆ ಒಟಿಪಿ ಸಂಖ್ಯೆ ನೀಡಿ ಒಂದು ಲಕ್ಷ ರೂ.ವನ್ನು ಕಳೆದುಕೊಂಡು ಮೋಸ ಹೋಗಿದ್ದಾರೆ.

ಕಡಬ ನಿವಾಸಿ ಧರಣೇಂದ್ರ ಜೈನ್ ಎಂಬವರ ಮೊಬೈಲ್ ಸಂಖ್ಯೆಗೆ ಎಪ್ರಿಲ್ 10 ರಂದು ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿಯು ಕರೆಮಾಡಿ ತಾನು ಏರ್ಟೆಲ್ ಕಸ್ಟಮರ್ ಕೇರ್ ನಿಂದ ಕರೆ‌ಮಾಡುವುದಾಗಿ ಪರಿಚಯಿಸಿಕೊಂಡಿದ್ದು, ನಿಮ್ಮ ಸಿಮ್‌ ಆ್ಯಕ್ಟಿವೇಟ್ ಮಾಡಬೇಕಾಗಿದ್ದು, ಅದಕ್ಕಾಗಿ ಒಟಿಪಿ ನಂಬರ್ ಕಳುಹಿಸಿ ಕೊಡುತ್ತೇವೆ‌ ಎಂದು ತಿಳಿಸಿದಾಗ ಧರಣೇಂದ್ರ ಜೈನ್ ರ ಪುತ್ರ ಒಟಿಪಿ ಸಂಖ್ಯೆಯನ್ನು ಅಪರಿಚಿತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ತಕ್ಷಣವೇ 50 ಸಾವಿರ ರೂ, 24900 ಹಾಗೂ 25000 ಹಣವನ್ನು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಲಾಗಿದೆ. ಈ ಮೂಲಕ ಒಟ್ಟು 99900 ರೂ. ಗಳನ್ನು ಕಳೆದುಕೊಂಡು ತಾನು ಮೋಸ ಹೋಗಿರುವುದಾಗಿ ಇದೀಗ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು