Wednesday, January 22, 2025
ಸಿನಿಮಾ

ಕೊರೋನಾ ಲಾಕ್ ಡೌನ್ ಮಧ್ಯೆಯೂ ಅಶ್ಲೀಲ ಜಾಲತಾಣದಲ್ಲಿ ಬಿಗ್ ಬಾಸ್ ಸ್ಪರ್ಧಿಯ ನಗ್ನ ಫೋಟೋ & ವಿಡಿಯೋಗಳು ವೈರಲ್..! – ಕಹಳೆ ನ್ಯೂಸ್

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕುಕೃತ್ಯಕ್ಕೆ ಬಳಸಿಕೊಳ್ಳುವ ಪರಿಪಾಠ ಇಂದು ನಿನ್ನೆಯದಲ್ಲ. ಇಂತಹ ಕೃತ್ಯ ಎಸಗುವ ದೊಡ್ಡ ಜಾಲವೇ ಇಂದು ಸಕ್ರೀಯವಾಗಿದೆ

ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ತಮಿಳು ಬಿಗ್ ಬಾಸ್ ಸೀಸನ್ 3 ಸ್ಪರ್ಧಿ, ನಟಿ, ರೂಪದರ್ಶಿ ಮೀರಾ ಮಿಥುನ್ ಫೋಟೋಗಳು ಪೋರ್ನ್​ ಸೈಟ್​ನಲ್ಲಿ ವೈರಲ್ ಆಗಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು


ಸೆಲೆಬ್ರಿಟಿಗಳ ಫೋಟೋಗಳನ್ನು ಎಡಿಟಿಂಗ್ ಮಾಡಿ ಅಶ್ಲೀಲವಾಗಿ ಮಾರ್ಪಡಿಸುವ ಕೆಲಸ ನಿನ್ನೆ ಮೊನ್ನೆಯದಲ್ಲ. ಈ ಹಿಂದೆ ನಟಿ ನಮಿತಾ, ತ್ರಿಷಾ, ಶ್ರುತಿ ಹಾಸನ್ ಸೇರಿದಂತೆ ಒಂದಷ್ಟು ಜನರು ಇದಕ್ಕೆ ಬಲಿಯಾಗಿದ್ದರು. ಇವರ ಕುಕೃತ್ಯಕ್ಕೆ ಹೊಸದಾಗಿ ಬಲಿಯಾಗಿರುವುದು ಮೀರಾ ಮಿಥುನ್.

ಜಾಹೀರಾತು
ಜಾಹೀರಾತು
ಜಾಹೀರಾತು

ಪೋರ್ನ್​ ಸೈಟ್​ನಲ್ಲಿ ಮೀರಾ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಡಲಾಗಿದ್ದು, ಇದರೊಂದಿಗೆ ಆಕೆಯ ಮೊಬೈಲ್ ನಂಬರ್ ಕೂಡ ಪ್ರಕಟಿಸಲಾಗಿದೆ.

ಹೀಗೆ ಫೋಟೋ ಅಶ್ಲೀಲ ತಾಣಗಳಲ್ಲಿ ವೈರಲ್ ಮಾಡಿ ದುರುಳರು ಇದೀಗ ನಟಿಯ ಹೆಸರಿಗೆ ಕಳಂಕ ತರುವ ಪಯತ್ನ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್, ಮೆಸೇಜ್​ಗಳು ಬರುತ್ತಿದ್ದಂತೆ ನಟಿ ಎಚ್ಚರಗೊಂಡಿದ್ದಾರೆ.

ಅಲ್ಲದೆ ಇದರ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚದೇ ಬಿಡುವುದಿಲ್ಲ. ಅಂತಹವರಿಗೆ ಶಿಕ್ಷೆಯಾಗಲು ನಾನು ಕಾನೂನು ಹೋರಾಟ ಮಾಡುವುದಾಗಿ ಮೀರಾ ಮಿಥುನ್ ತಿಳಿಸಿದ್ದಾರೆ.