Wednesday, January 22, 2025
ರಾಜಕೀಯಸುದ್ದಿ

‘ಮಾತೆರೆಗ್‌ ಬಿಸುತ ಸುಭಾಸುಯೊಲು’ – ತುಳುವಿನಲ್ಲಿ ಶುಭಕೋರಿದ ಮುಖ್ಯಮಂತ್ರಿ ಬಿಎಸ್‌ವೈ – ಕಹಳೆ ನ್ಯೂಸ್

ಬೆಂಗಳೂರು, ಎ.14  : ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಮಾಡಲಾಗಿದ್ದು ಎಲ್ಲಾ ಹಬ್ಬ, ಸಡಗರದ ದಿನಗಳು ಕಳೆಗುಂದಿದೆ. ಇಂದು ಮಂಗಳೂರಿನಲ್ಲಿ ಬಿಸು ಸಂಭ್ರಮವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಶುಭ ದಿನಕ್ಕೆ ತುಳು ಭಾಷೆಯಲ್ಲಿ ಶುಭಾಷಯ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜನತೆಗೆ ಶುಭಾಕೋರಿ ಟ್ವೀಟ್‌ ಮಾಡಿರುವ ಅವರು, “ಬಿಸುವಿನ ದಿನ ಹೊಸ ಕನಸು, ಹೊಸ ಮನಸು, ಹೊಸ ತಿನಿಸು, ಎಲ್ಲವೂ ಹೊಸತಾಗಲಿ. ಈ ಹೊಸ ವರ್ಷದಲ್ಲಿ ಹಳೆಯ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೆ ಬಿಸುವಿನ ಶುಭಾಶಯಗಳು” ಎಂದು ತುಳು ಭಾಷೆಯಲ್ಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

 

ಹಾಗೆಯೇ ಆ ಬಳಿಕ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದು ಸೌರ ಸಂವತ್ಸರ,’ ‘ಸ್ಥಿರ ಸಂವತ್ಸರ’ ಎಂದು ಕರೆಯಲಾಗುವ ‘ವಿಷು’ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಈ ಸೌರಮಾನ ಯುಗಾದಿಯು, ಎಲ್ಲರ ಬಾಳಿನಲ್ಲೂ ಸುಖ, ಸಂತೋಷಗಳನ್ನು ತರಲಿ ಎಂದು ಶುಭ ಕೋರಿದ್ದಾರೆ.