ನವದೆಹಲಿ: ಡಿಸ್ಚಾರ್ಜ್ ಆಗಿದ್ದ ಕೊರೊನಾ ರೋಗಿಗಳಿಗೆ ಮತ್ತೆ ಸೋಂಕು ಬಂದಿದ್ದು ಆತಂಕ ಎದುರಾಗಿದೆ.
ದೆಹಲಿ ಹೊರವಲಯದ ನೋಯ್ಡಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆದು ಶುಕ್ರವಾರ ಡಿಸ್ಚಾರ್ಜ್ ಆಗಿದ್ದರು.
ಡಿಸ್ಚಾರ್ಜ್ ಆಗುವ ಮುನ್ನ 24 ಗಂಟೆಯಲ್ಲಿ ಎರಡು ಬಾರಿ ಪರೀಕ್ಷೆ ಮಾಡಿದ್ದು ನೆಗೆಟಿವ್ ಬಂದಿತ್ತು. ಇದಾದ ಬಳಿಕ ಗಂಟಲಿನ ದ್ರವನ್ನು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರು ಪರೀಕ್ಷಿಸಿದ ಬಳಿಕ ವರದಿಯನ್ನು ಕೇಂದ್ರ ಸರ್ಕಾರ ಕಳುಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣ ಬಂದಿರುವ ಗೌತಮ ಬುದ್ಧ ನಗರದಲ್ಲಿ ನೋಯ್ಡಾ ಬರುತ್ತದೆ.
ಉತ್ತರ ಪ್ರದೇಶಲ್ಲಿ ಒಟ್ಟು 558 ಮಂದಿಗೆ ಕೊರೊನಾ ಬಂದಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಗೌತಮ ಬುದ್ಧ ನಗರದಲ್ಲಿ 66 ಮಂದಿಗೆ ಸೋಂಕು ಬಂದಿದೆ.
ಈ ಹಿಂದೆ ಚೀನಾದಲ್ಲೂ ಗುಣಮುಖರಾಗಿದ್ದ ರೋಗಿಗಳಿಗೆ ಕೊರೊನಾ ಬಂದಿದೆ ಎಂದು ವರದಿಯಾಗಿತ್ತು.