Thursday, January 23, 2025
ರಾಜಕೀಯಸುದ್ದಿ

ದೇಶದಲ್ಲಿ ಆಹಾರ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಿಲ್ಲ ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ – ಕಹಳೆ ನ್ಯೂಸ್

ನವದೆಹಲಿ, ಎ.14 : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌‌ಡೌನ್‌ನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಇಂದು ಭಾಷಣದಲ್ಲಿ ಹೇಳಿದ ಬಳಿಕ ಗೃಹ ಸಚಿವ ಅಮಿತ್‌ ಶಾ ಸರಣಿ ಟ್ವೀಟ್‌ಗಳನ್ನು ಮಾಡಿದ್ದು ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೃಹ ಸಚಿವನಾಗಿ ನಾನು ಎಲ್ಲರಲ್ಲೂ ಹೇಳಲು ಬಯಸುತ್ತೇನೆ. ದೇಶದಲ್ಲಿ ಆಹಾರ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಿಲ್ಲ. ಅವೆಲ್ಲದರ ಬೇಕಾದಷ್ಟು ದಾಸ್ತಾನು ಇದೆ. ಈ ವಿಷಯದಲ್ಲಿ ಯಾವ ಪ್ರಜೆಗಳು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್‌ಡೌನ್‌ ಜಾರಿ ಮಾಡುವ ವಿಚಾರದಲ್ಲಿ ಕೇಂದ್ರ ರಾಜ್ಯ ಸರ್ಕಾರದ ನಡುವೆ ಸಹಕಾರವಿರಬೇಕು. ದೇಶದ ಯಾವುದೇ ಜನರಿಗೆ ತೊಂದರೆಯಾಗಬಾರದು. ಆ ಹಿನ್ನಲೆಯಲ್ಲಿ ರಾಜ್ಯ ಕೇಂದ್ರ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಇಂತಹ ಸಂದರ್ಭದಲ್ಲಿ ಶಕ್ತರು ಅಶಕ್ತರಿಗೆ ಸಹಾಯ ಮಾಡಬೇಕು. ನಿಮ್ಮ ನೆರೆಹೊರೆಯಲ್ಲಿ ಇರುವ ಬಡವರಿಗೆ ಸಹಾಯ ಮಾಡಿ ಎಂದು ಅಮಿತ್‌ ಶಾ ಮನವಿ ಮಾಡಿದ್ದಾರೆ.

 

ಎಲ್ಲರೂ ಕೂಡಾ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಕೊರೊನಾ ನಿವಾರಣೆಗಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳಿಗೆ ನಾವೆಲ್ಲರೂ ಗೌರವ ನೀಡಬೇಕು. ದೈರ್ಯದಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಸ್ಪಂದಿಸುತಿರುವ ರೀತಿ ಎಲ್ಲಾ ಭಾರತೀಯರಿಗೆ ಪ್ರೇರಣೆ ಎಂದು ಹೇಳಿದ್ದಾರೆ.