Recent Posts

Sunday, November 17, 2024
ಸುದ್ದಿ

ಲಾಕ್ ಡೌನ್ ವಿನಾಯಿತಿ ದುರುಪಯೋಗ ; ಅನಗತ್ಯ ತಿರುಗುವ ವಾಹನಗಳಿಗೆ ಬಿಸಿ ಮುಟ್ಟಿಸಿದ ಬೆಳ್ತಂಗಡಿ ಪೊಲೀಸರು – ಕಹಳೆ ನ್ಯೂಸ್

ಬೆಳ್ತಂಗಡಿ, ಏ 14 : ಲಾಕ್ ಡೌನ್ ಘೋಷಿಸಿರುವ ಸರಕಾರ, ಅಗತ್ಯ ಕೆಲಸಗಳಿಗೆ ಮಾತ್ರ ಮಧ್ಯಾಹ್ನ 12 ಗಂಟೆವರೆಗೆ ಸಮೀಪದ ಅಂಗಡಿಗೆ ಹೋಗಿ ಬರಲು ಅವಕಾಶ ಕಲ್ಪಿಸಿದೆ. ಕೃಷಿಕರಿಗೆ ಇದೇ ಸಂದರ್ಭದಲ್ಲಿ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರ ಲಾಕ್ ಡೌನ್ ನ ಸಂದರ್ಭ ಅಗತ್ಯಗಳಿಗೆ ನೀಡಿದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಮನಬಂದಂತೆ ತಮ್ಮ ವಾಹನವೇರಿ ಸುತ್ತಾಡುತ್ತಿದ್ದಾರೆ. ಇಂತಹ ವಿವೇಚನಾರಹಿತರಿಗೆ ಬಿಸಿ ಮುಟ್ಟಿಸುವ ಕೆಲಸ ಎಪ್ರಿಲ್ 14ರ ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ದಡ್ಕದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಗತ್ಯ ತಿರುಗುವ ವಾಹನಗಳನ್ನು ಮದ್ದಡ್ಕ ಬಳಿ ತಡೆದ ಬೆಳ್ತಂಗಡಿ ಪೊಲೀಸರು, ಸೂಕ್ತ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದರು.